ಸಮಾಜ ಹಾಗೂ ಕುಟುಂಬದ ಯಶಸ್ಸಿಗೆ ಮಹಿಳೆಯರೇ ಪ್ರೇರಕ ಶಕ್ತಿ: ಕೃಷ್ಣ ಬೈರೇಗೌಡ

Udayavani News
0
ಸಮಾಜ ಹಾಗೂ ಕುಟುಂಬದ ಯಶಸ್ಸಿಗೆ ಮಹಿಳೆಯರೇ ಪ್ರೇರಕ ಶಕ್ತಿ: ಕೃಷ್ಣ ಬೈರೇಗೌಡ

• ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಭಿಮತ
• ಮಹಿಳೆಯರಿಗೆ ಹೆಚ್ಚಿನ ಅವಕಾಶ ನೀಡಲು ಒತ್ತಾಯ
• ಮಹಿಳೆಯರಿಗಾಗಿ ರಂಗೋಲಿ-ಪ್ಯಾಷನ್ ಶೋ ಕಾರ್ಯಕ್ರಮ
• ಕಾರ್ಯಕ್ರಮದಲ್ಲಿ ಸುನಿಧಿ ಗಣೇಶ್ ಅವರಿಂದ ರಸ ಸಂಜೆ

ಬೆಂಗಳೂರು ಮಾರ್ಚ್ 08: ಸಮಾಜ ಹಾಗೂ ಪ್ರತಿಯೊಂದು ಕುಟುಂಬದ ಏಳಿಗೆ-ಯಶಸ್ಸಿಗೆ ಮಹಿಳೆಯರೇ ಪ್ರೇರಕ ಶಕ್ತಿ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಭಿಪ್ರಾಯಪಟ್ಟಿದ್ದಾರೆ.

ವಿಶ್ವ ಮಹಿಳಾ ದಿನದ ಅಂಗವಾಗಿ ರಾಜೀವ್ಗಾಂಧಿ ನಗರದ ಕೆನರಾ ಬ್ಯಾಂಕ್ ಲೇಔಟ್ ಉದ್ಯಾನವನದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕೆಬಿಜಿ ತಂಡ ಆಯೋಜಿಸಿದ್ದ “ಸ್ತ್ರೀ ಸಂಭ್ರಮ” ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

“ಮಹಿಳೆಯರಿಲ್ಲದ ಸಮಾಜವನ್ನು ಊಹಿಸಿಕೊಳ್ಳುವುದೂ ಸಾಧ್ಯವಿಲ್ಲ. ಕುಟುಂಬ ವ್ಯವಸ್ಥೆಯೇ ಗಟ್ಟಿಯಾಗಿರುವ ನಮ್ಮ ಭಾರತೀಯ ಸಮಾಜದಲ್ಲಿ ಮಹಿಳೆಯರ ಕೊಡುಗೆಯನ್ನೂ-ದುಡಿಮೆಯನ್ನೂ ಕನಿಷ್ಟ ಗುರುತಿಸಿ ಗೌರವಿಸುವ ಕೆಲಸವೂ ಆಗುತ್ತಿಲ್ಲ” ಎಂದು ಬೇಸರ ಹೊರಹಾಕಿದರು.

“ಮಹಿಳೆಯರ ಶ್ರಮಕ್ಕೆ ಸಾಧನೆಗೆ ನಾವು ಕನಿಷ್ಠ ಗೌರವವನ್ನಾದರೂ ಸಲ್ಲಿಸಬೇಕು. ಮಹಿಳೆಯರನ್ನು ಗೌರವಿಸಿದರೆ ಮನೆ ದೇಶ ಪ್ರಪಂಚಕ್ಕೆ ಒಳ್ಳೆಯದು. ಆದರೆ, ದಿನಿನಿತ್ಯ ಅವರಿಗೆ ಧನ್ಯವಾದ ಸಲ್ಲಿಸಲಾಗದು. ಹೀಗಾಗಿಯೇ ವರ್ಷದಲ್ಲೊಂದು ದಿನ ಮಹಿಳೆಯರಿಗೆ ಮೀಸಲಾಗಿದ್ದು, ಈ ದಿನದಲ್ಲಾದರೂ ಅವರನ್ನು ಗೌರವಿಸುವ ಕೆಲಸವಾಗಬೇಕು” ಎಂದರು.

ಮುಂದುವರೆದು, “ನಮ್ಮದು ಪುರುಷ ಪ್ರಧಾನ ಸಮಾಜ. ಆದರೆ, ಸಂವಿಧಾನ ಪುರುಷರಿಗೆ ಮಹಿಳೆಯರು ಸಮಾನರು ಎಂದೇ ಸಾರಿದೆ. ಗಾರ್ಮೆಂಟ್ಸ್ನಿಂದ ದೇಶದ ಉನ್ನತ ಹುದ್ದೆಯವರೆಗೂ ಮಹಿಳೆಯರು ನಿಭಾಯಿಸಿದ್ದಾರೆ. ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಆದರೂ, ಕೆಲವರ ಮನಸ್ಥಿತಿ ಬದಲಾಗಿಲ್ಲ. ಅಂತವರ ಮನಸ್ಸನ್ನು ಬದಲಿಸುವ ಯತ್ನವೇ ಈ ಕಾರ್ಯಕ್ರಮ” ಎಂದು ತಿಳಿಸಿದರು.

“ಕ್ರೀಡೆ ಎಂದಾಕ್ಷಣ ನಮ್ಮ ನೆನಪಿಗೆ ಬರುವುದು ಎಂಟು ದೇಶಗಳು ಭಾಗವಹಿಸುವ ಕ್ರಿಕೆಟ್ ಮಾತ್ರ. ಆದರೆ, ನೂರಾರು ದೇಶಗಳು ಭಾಗವಹಿಸುವ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಿದ್ದು ಮಹಿಳೆಯರು. ಹೀಗಾಗಿ ಸಮಾಜದ ಎಲ್ಲರೂ ತಮ್ಮ ಮನೆಯ ಹೆಣ್ಣು ಮಕ್ಕಳಿಗೆ ಹೆಚ್ಚು ಅವಕಾಶವನ್ನು ನೀಡಬೇಕು. ಅವರಿಗೆ ಸ್ಫೂರ್ತಿಯಾಗಬೇಕು ಎಂಬ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದಲೇ “ಸ್ತ್ರೀ ಸಂಭ್ರಮ” ಕಾರ್ಯಕ್ರಮ ಆಯೋಜಿಸಲಾಗಿದೆ” ಎಂದರು.

ಕಾರ್ಯಕ್ರಮದಲ್ಲಿ ರಂಗೋಲಿ ಮಹಿಳೆಯರಿಗೆ ಫ್ಯಾಷನ್ ಶೋ ಸೇರಿದಂತೆ ನಾನಾ ಸ್ಫರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಫರ್ಧೆಯಲ್ಲಿ ಗೆದ್ದವರಿಗೆ ಕರ್ನಾಟಕ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಸೌಮ್ಯ ರೆಡ್ಡಿ ಅವರು ಬಹುಮಾನ ನೀಡಿ ಸನ್ಮಾನಿಸಿದರು. ಅಲ್ಲದೆ, ಯುವ ಗಾಯಕಿ-ಸಂಗೀತಗಾರ್ತಿ ಸುನಿಧಿ ಗಣೇಶ್ ಸಂಗೀತ ರಸ ಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

Post a Comment

0Comments

Post a Comment (0)