ಲಿಂಗಸೂಗೂರು :ಮಾರ್ಚ್ 02 :ಪಟ್ಟಣದ ಉಮಾ ಮಹೇಶ್ವರಿ ಮಹಿಳಾ ಪದವಿ ಮಹಾವಿದ್ಯಾಲಯ ಹಳ್ಳಿಯ ಸೊಗಡು ಕಾರ್ಯಕ್ರಮ ಆಯೋಜಿಸಲಾಗಿದ್ದು ಕಾಲೇಜು ವಿದ್ಯಾರ್ಥಿನಿಯರು ಹಳ್ಳಿ ಸೊಗಡಿನ ಉಡೋಗೆ ತೋಡುಗೆಯಲ್ಲಿ. ಸವಿಯೋಣ ಬಾರಾ.ಜೀವನದ ಸೊಗಡನ್ನು ಅನುಭವಿಸುವ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡು ಸಂಭ್ರಮಿಸಿದರು.
ಈ ಸಂದರ್ಭ ವಿದ್ಯಾರ್ಥಿನಿಯರು ಸಾಂಪ್ರದಾಯಿಕ ಇಲಕಲ್ ಸೀರೆ, ಕೊರಳಿಗೆ ಬೋರಮಾಳ, ನೆಕ್ಲಸ್ ಸರ್ ಮತ್ತು ಕುಪ್ಪಸದ ಉಡುಗೆ ತೊಟ್ಟು, ಗ್ರಾಮೀಣ ಕೃಷಿ ಮತ್ತು ಆಹಾರ ಪದಾರ್ಥಗಳನ್ನು ತಯಾರಿಸಿ ಪ್ರದರ್ಶನ ನೀಡಿದರು. ಉಪನ್ಯಾಸಕ ವೃಂದವು ಅಪ್ಪಟ ಗ್ರಾಮೀಣ ಉಡುಗೆ ತೊಡುಗೆ ಧೋತಿ, ಲುಂಗಿ ನೆಹರು ಶರ್ಟ್ ತೊಟ್ಟು ಸಾಂಪ್ರದಾಯಿಕತೆ ಮೆರೆದರು. ವಿದ್ಯಾರ್ಥಿನಿಯರು ಬಳಿಕ, ಈ ಶ್ರದ್ಧಯುತ ಕಾರ್ಯಕ್ರಮದ ಭಾಗವಾಗಿ ಒಟ್ಟಾಗಿ ಊಟವನ್ನು ಸವಿದರು.
ಈ ಮೊದಲು ರೊಟ್ಟಿ ಬೂತಿ ಸೇರಿ ಕೃಷಿ, ತೋಟಗಾರಿಕೆ ಉತ್ಪನಗಳನ್ನು ವಿದ್ಯಾಥಿನಿಯರು ಕಾಲೇಜು ಆವರಣದಲ್ಲಿ ಎತ್ತಿನ ಬಂಡಿ ವಾದ್ಯದ ಮೂಲಕ ಅತಿಥಿಗಳನ್ನು ಕಾರ್ಯಕ್ರಮದ ವೇದಿಕೆಯ ವರೆಗೆ ಮೆರವಣಿಗೆ ಕೈಗೊಂಡರು.
ಕಾರ್ಯಕ್ರಮದಲ್ಲಿ ಮುಖ್ಯ ಹಳ್ಳಿಯ ಆಹಾರ ಪದ್ಧತಿ ಕೇವಲ ರುಚಿಗಾಗಿ ಮಾತ್ರವಲ್ಲ, ಆರೋಗ್ಯಯುಕ್ತ ಜೀವನದ ಹತ್ತಿರ ಕರೆದೊಯ್ಯುವ ಮಾರ್ಗವಾಗಿದೆ. ಸಾಂಪ್ರದಾಯಿಕ ಆಹಾರವು ನಮ್ಮ ಆರೋಗ್ಯವರ್ಧಕವಾಗಿದೆ ಮತ್ತು ಜೈವಿಕ ಪದ್ದತಿಯಲ್ಲಿ ಬೆಳೆಯುವ ಅಂಶಗಳೂ ಇದರಲ್ಲಿ ಸೇರಿವೆ” ಹಳ್ಳಿಯ ಆಚಾರ ವಿಚಾರಗಳು ಆದುನಿಕತೆಗೆ ಸಿಕ್ಕಿ ಮರೆಯಾಗುತ್ತಿದೆ. ನಾವು ಎಲ್ಲಾರು ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರ ಗುರು ಹಿರಿಯರಿಗೆ ಗೌರವ ತಂದೆ ತಾಯಿಗಳಿಗೆ ಗೌರವ ಪ್ರೀತಿಯಿಂದ ಅವರ ಆರೈಕೆ ಮಾನವೀಯ ಮೌಲ್ಯ ಗಳನ್ನು ಬೆಳಸಿಕೊಳ್ಳಬೇಕು ಎಂದು ನಿವೃತ್ತ ಶಿಕ್ಷಕರಾದ ಮಲ್ಲಿಕಾರ್ಜುನ ಕಮತಗಿ ಅವರು ಹೇಳಿದರು. ಹಳ್ಳಿಯ ಸೊಗಡಿನ ಬಗ್ಗೆ ವಿಶೇಷ ಉಪನ್ಯಾಸವನ್ನು ನೀಡಲು ಬಂದ ವೆಂಕನಗೌಡ ವಟಗಲ್ ಅವರು, ಈ ರೀತಿಯ ಕಾರ್ಯಕ್ರಮಗಳು ವಿದ್ಯಾರ್ಥಿನಿಯರಲ್ಲಿ ಕೌಶಲ್ಯ, ಸ್ವಾವಲಂಬನ ಮತ್ತು ಸಂಸ್ಕೃತಿಯ ಪ್ರಾಮುಖ್ಯತೆಯನ್ನು ಹೆಚ್ಚಿಸುವಂತೆ ಪ್ರೇರೇಪಿಸುತ್ತವೆ ಎಂದು ಅಭಿಪ್ರಾಯಪಟ್ಟರು. ಕಾಲೇಜಿನ ಆಡಳಿತಧಿಕಾರಿಗಳಾದ ವಿನಯ ಕುಮಾರ ಗಣಾಚಾರಿ “ಈ ತರಹದ. ವಿಶೇಷ. ಕಾರ್ಯಕ್ರಮ ಆಯೋಜನೆ ಮಾಡಿದ್ದು ನಮ್ಮ್ ಹಳ್ಳಿಯ ಸಂಸ್ಕೃತಿ ವಿದ್ಯಾರ್ಥಿನಿಯರ ವ್ಯಾಸಂಗದ ಜೊತೆಗೆ ಗ್ರಾಮೀಣ ಜೀವನದ ಅರಿವು ಮೂಡಿಸುವ ಹಿತದಾಯಕ ಕಾರ್ಯಕ್ರಮಗಳಾಗಿವೆ” ಎಂದು ಶ್ಲಾಘಿಸಿದರು.
ಸಂಸ್ಥೆಯ ಅದ್ಯೇಕ್ಷರು ಶರಣ ಬಸವ ಗಣಾಚಾರಿ ಯಾವುದೇ ಸಂಸ್ಕೃತಿ ಆಚರಣೆ ಮಾಡುವಲ್ಲಿ ಹೆಣ್ಣು ಮಕ್ಕಳ ಪಾತ್ರ ತುಂಬಾ ಮಹತ್ವ ದಾಗಿದೆ ಮಕ್ಕಳಿಗೆ ತಂತ್ರಜ್ಞಾನವನ್ನು ಸದ್ವಿನಿಯೋಗ ಮಾಡಿಕೊಳ್ಳಲು ಸೂಚಿಸಿದರು.
“ಸಾಂಪ್ರದಾಯಿಕ ಗ್ರಹಣವನ್ನು ಉಳಿಸಿಕೊಂಡು, ಆಧುನಿಕ ತಂತ್ರಜ್ಞಾನವನ್ನು ಕಲಿಕೆಯಲ್ಲಿ ಬಳಸಿಕೊಂಡು ಉನ್ನತ ಮಟ್ಟದ ಸಾಧನೆ ಮಾಡುವ ದಿಸೆಯಲ್ಲಿ ವಿದ್ಯಾರ್ಥಿನಿಯರು ಮುಂದುವರಿಯಬೇಕು” ಎಂದು ಸಲಹೆ ನೀಡಿದರು..
ಈ ಕಾರ್ಯಕ್ರಮದಲ್ಲಿಸಮ ಕಾಲೇಜಿನ ಉಪನ್ಯಾಸಕ ವೃಂದ. ಸಿಬ್ಬಂದಿಗಳು ವಿದ್ಯಾರ್ಥಿನಿಯರು, ಪಾಲ್ಗೊಂಡಿದ್ದರು