ಬೆಂಗಳೂರು ಮಾರ್ಚ 07 : ಇದೊಂದು ಸಾಲದ ಬಜೆಟ್, ಸಾಲ ಮಾಡಿಯಾದರೂ ತುಪ್ಪ ತಿನ್ನುವ ಬಜೆಟ್, ಇದು ಅಲ್ಪ ಸಂಖ್ಯಾತರ ಓಲೈಕೆಯ ಬಜೆಟ್ ಆಗಿದೆ, ಅಲ್ಪ ಸಂಖ್ಯಾತರಿಗೆ ಬೆಣ್ಣೆ, ಬಹುಸಂಖ್ಯಾತರಿಗೆ ಸುಣ್ಣ, ರಾಜ್ಯದ ಅಭಿವೃದ್ಧಿ ಶೂನ್ಯ ಬಜೆಟ್
-ಎನ್ ರವಿಕುಮಾರ್
ಇಂದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ 16 ನೇ ಐತಿಹಾಸಿಕ ಬಜೆಟ್ ಸಂಪೂರ್ಣ ಸಾಲಮಯ ಬಜೆಟ್ ಆಗಿದೆ.
ಬಜೆಟ್ ಗಾತ್ರ 4,09,549 ಕೋಟಿ ಆಗಿದೆ, ಆದರೆ ಇದರಲ್ಲಿ 1,16,170 ಕೋಟಿ ಸಾಲದ ಹೊರೆ ರಾಜ್ಯದ ಜನತೆಗೆ ಸಿದ್ದರಾಮಯ್ಯ ಅವರು ಹೊರಿಸಿದ್ದಾರೆ.
ಕರ್ನಾಟಕ ಇತಿಹಾಸದಲ್ಲೆ ಅತೀ ಹೆಚ್ಚು ಸಾಲ ಮಾಡಿದಂತಹ ಸರ್ಕಾರ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ. ಈ ಬಜೆಟ್ ನಲ್ಲಿ ವಿತ್ತಿಯ ಕೊರತೆ 7,447 ಕೋಟಿ ರೂ ಹೆಚ್ಚಳವಾಗಿದೆ.
₹1000 ಕೋಟಿ ಅಲ್ಪಸಂಖ್ಯಾತರ ಕಲ್ಯಾಣಕ್ಕೆ,₹ 150 ಕೋಟಿ ವಕ್ಫ ರಕ್ಷಣೆಗೆ, ₹100 ಕೋಟಿ ಉರ್ದು ಶಾಲೆಗಳಿಗೆ, ₹6000 ಇಮಾಮ್‌ಗಳಿಗೆ ಗೌರವ ಧನ ಸೇರಿದಂತೆ ಸರ್ಕಾರಿ ಕಾಮಗಾರಿಗಳಲ್ಲಿ ಶೇ. 4 ರಷ್ಟು ಮುಸ್ಲಿಂರಿಗೆ ಮೀಸಲು, ಸರಳ ವಿವಾಹಕ್ಕೆ 50,000 ಘೋಷಣೆ ಮಾಡಿದ್ದಾರೆ ಹೀಗಾಗಿ ಇದು ಮುಸ್ಲಿಂ ತುಷ್ಟಿಕರಣ ಸರ್ಕಾರವಾಗಿದೆ.
ಆದರೆ ಈ ಕಾಂಗ್ರೇಸ್ ಸರ್ಕಾರದಲ್ಲಿ ಬಹುಸಂಖ್ಯಾತರಿಗೆ ಚಿಪ್ಪು, ಚೊಂಬು ನೀಡಿದ ಕಾಂಗ್ರೇಸ್ ಸರ್ಕಾರ.
ನೀರಾವರಿ ಯೋಜನೆಗಳಿಗೆ ಯಾವುದೇ ಹಣ ಮೀಸಲಿಟ್ಟಿಲ್ಲ, ಮೇಕೆದಾಟು ಯೋಜನೆಗೆ ನಯಾ ಪೈಸೆ ಇಟ್ಟಿಲ್ಲ, ಕಳಸ-ಬಂಡೂರಾ ನಾಲಾ ಯೋಜನೆ, ಉತ್ತರ ಕರ್ನಾಟಕದ ಪ್ರಮುಖ ಯುಕೆಪಿ ಯೋಜನೆಗೆ ಅನುದಾನ ನಿಗದಿ ಮಾಡಿಲ್ಲ, ತುಂಗಭದ್ರಾ ಜಲಾಶಯ ಹೂಳು ತೆಗೆಯಲು ಈ ಹಿಂದಿನ ಬಜೆಟ್ ನಲ್ಲೂ ಹೇಳಿದ್ರು, ಈ ಬಜೆಟ್ ನಲ್ಲೂ ಸಹ ಯಾವುದೇ ಹಣ ಇಟ್ಟಿಲ್ಲ.
ರಾಜ್ಯದ ಉತ್ತರ ಕರ್ನಾಟಕ, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ, ಕರಾವಳಿ ಕರ್ನಾಟಕ ಭಾಗಕ್ಕೂ ಸಹ ಯಾವುದೇ ಹೊಸ ಯೋಜನೆ, ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಮೀಸಲಿಟ್ಟಿಲ್ಲ.
ರಾಜ್ಯದ ಮಹಿಳೆಯರಿಗೆ, ಯುವಕರಿಗೆ, ರೈತಾಪಿ ವರ್ಗಕ್ಕೆ ಯಾವುದೇ ಭವಿಷ್ಯದ ಯೋಜನೆಗಳಿಲ್ಲ,
ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಸೇರಿದಂತೆ ಹಲವಾರು ಅಭಿವೃದ್ಧಿ ನಿಗಮ ಮಂಡಳಿಗಳಿಗೆ ಯಾವುದೇ ಹೊಸ ಯೋಜನೆಗಳಿಲ್ಲ.
ರಾಜ್ಯದ ಕೃಷಿ, ಶಿಕ್ಷಣ, ನೀರಾವರಿ, ಆರೋಗ್ಯ, ಕೈಗಾರಿಕೆ, ಮೂಲ ಸೌಕರ್ಯ, ಗ್ರಾಮೀಣಾಭಿವೃದ್ಧಿ, ಇಂಧನ ಸೇರಿದಂತೆ ಪ್ರಮುಖ ವಲಯಗಳಿಗೆ ಯಾವುದೇ ಅನುದಾನ ನೀಡಿಲ್ಲ,
ಬೆಂಗಳೂರು ನಗರ ಅಭಿವೃದ್ದಿಗೆ ಯಾವುದೇ ಹೊಸ ಯೋಜನೆ, ಅನುದಾನ ಘೋಷಣೆ ಮಾಡಿಲ್ಲ,
ರಾಜ್ಯದ ಜನರ ಹಾಗೂ ಸರ್ಕಾರಿ ನೌಕರರ ಮೇಲೆ ತೆರಿಗೆಯ ಬರ ಹಾಕಿದ್ದಾರೆ.
ಕೃಷಿಕರು, ಕಾರ್ಮಿಕರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಎನ್.ಹೆಚ್.ಎಂ ನೌಕರರು ಸೇರಿದಂತೆ ಶ್ರಮಿಕ ವರ್ಗಗಳನ್ನು ಕಡೆಗಣಿಸಿ ಅಧಿಕಾರಕ್ಕೆ ಬರುವ ಮುನ್ನ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಯಾವುದೇ ಅಂಶಗಳನ್ನು ಬಜೆಟ್ ನಲ್ಲಿ ಕಾರ್ಯಗತಗೊಳಿಸಲು ಯಾವುದೇ ಹೊಸ ಭರವಸೆಯ ಹೆಜ್ಜೆ ಇಡದೇ ಕೊಟ್ಟ ಮಾತು ತಪ್ಪಿದ ಬಜೆಟ್ ಆಗಿದೆ.
ಒಟ್ಟಾರೆಯಾಗಿ ಈ ಬಜೆಟ್ ರಾಜ್ಯದ ಆರ್ಥಿಕ ಪ್ರಗತಿಗೆ ದೊಡ್ಡ ಹೊಡೆತವಾಗಿದೆ. ರಾಜ್ಯವನ್ನು 1,16000 ಕೋಟಿ ರೂ. ಸಾಲದ ಶೂಲಕ್ಕೆ ದೂಡಿರುವ Siddaramaiah ನವರ ಹದಿನಾರನೇ ಬಜೆಟ್ ಕರ್ನಾಟಕವನ್ನು ಅಕ್ಷರಶಃ ಆರ್ಥಿಕ ದುಸ್ಥಿತಿಗೆ ದೂಡಲಿದೆ.
ಈ ಬಾರಿಯ ಬಜೆಟ್ ನಲ್ಲಿ ರಾಜ್ಯಕ್ಕೆ ಅನುಕೂಲಕರವಾಗುವ ಯಾವುದೇ ದೂರಗಾಮಿ ಯೋಜನೆಗಳಿಲ್ಲ. ರಾಜ್ಯದ ಆದಾಯವನ್ನು ಹೆಚ್ಚಿಸಲು ಯಾವುದೇ ಉಪಕ್ರಮಗಳನ್ನು ಘೋಷಿಸದೇ, ಕೇವಲ ಸಾಲದ ಹೊರೆ ಹೆಚ್ಚಿಸಲಾಗಿದೆ. ಬಜೆಟ್ ಎನ್ನುವುದು ನನ್ನ ದೃಷ್ಟಿಯಲ್ಲಿ ಕೇವಲ ಬಿಳಿಹಾಳೆಯಲ್ಲ ಎಂದು ವ್ಯಾಖ್ಯಾನಿಸಿರುವ ಸಿದ್ದರಾಮಯ್ಯನವರು ಶಾಶ್ವತ ಯೋಜನೆಗಳತ್ತ ಗಮನ ಹರಿಸಿಲ್ಲ. ಇದೊಂದು ಸಂಪೂರ್ಣ ಜನ ವಿರೋಧಿ ಬಜೆಟ್ ಆಗಿದೆ.