ಹೆಣ್ಣಿನ ಪಾತ್ರ ಮಾಡಿದ್ದಕ್ಕೆ ಇವತ್ತು ನನಿಗೆ ಮದುವೆ ಆಗೋಕೆ ಹೆಣ್ಣು ಸಿಗುತ್ತಿಲ್ಲ; ರಾಘವೇಂದ್ರ

Udayavani News
0
ಹೆಣ್ಣಿನ ಪಾತ್ರ ಮಾಡಿದ್ದಕ್ಕೆ ಇವತ್ತು ನನಿಗೆ ಮದುವೆ ಆಗೋಕೆ ಹೆಣ್ಣು ಸಿಗುತ್ತಿಲ್ಲ; ರಾಘವೇಂದ್ರ

ರಾಘವೇಂದ್ರ ಅಂದರೆ ಸಾಕಷ್ಟು ಜನರಿಗೆ ಯಾರು ಎಂದು ಗೊತ್ತಾಗುವುದು ಕಷ್ಟ, ಅದೇ ರಾಗಿಣಿ ಎಂದರೆ ವೀಕ್ಷಕರಿಗೆ ಬಹಳ ಬೇಗ ಪಾತ್ರ ಕಣ್ಣು ಮುಂದೆ ಬರುವುದು. ಸಾಗರ ಮೂಲದ ನಟ ರಾಘವೇಂದ್ರ ಹುಡುಗಿ ಪಾತ್ರದ ಮೂಲಕವೇ ವೀಕ್ಷಕರ ಮನಸ್ಸು ಗೆದ್ದಿದ್ದಾರೆ. ಸಾಕಷ್ಟು ಪ್ರಶಸ್ತಿ ಸಮಾರಂಭಗಳಲ್ಲಿ ರಾಘವೇಂದ್ರ ಅವರು ಹೆಣ್ಣಿನ ಪಾತ್ರ ಹಾಕಿಯೇ ಸೆಲೆಬ್ರಿಟಿಗಳ ಜೊತೆ ಒಂದಷ್ಟು ತರಲೆ ತಮಾಷೆ ಕೂಡ ಮಾಡಿದ್ದರು.
ಹುಡುಗಿ ಪಾತ್ರ ಹಾಕುತ್ತಿರುವ ರಾಘವೇಂದ್ರ ಯಾವ ರೀತಿಯ ಕಷ್ಟ ಅನುಭವಿಸಿದರು? ಹುಡುಗಿ ಪಾತ್ರವನ್ನೇ ಪದೇ ಪದೇ ಯಾಕೆ ಹಾಕುತ್ತಿದ್ದಾರೆ ಎಂದು ಕೆಲವರಿಗೆ ಮಾಹಿತಿ ಇಲ್ಲದಿರಬಹುದು. ಸದ್ಯ ಅವರು ರಾಘವೇಂದ್ರ ಆಗಿ 'ಗಿಚ್ಚಿ ಗಿಲಿಗಿಲಿ' ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಸದಾ ಸ್ತ್ರೀ ವೇಷ ಹಾಕುತ್ತಿದ್ದ ಅವರಿಗೆ ಈಗ ರಾಘವೇಂದ್ರನಾಗಿ ಜನರ ಮುಂದೆ ಬರುತ್ತಿರುವುದು ಹೊಸತು ಅಂತಲೂ ಹೇಳಲುಬಹುದು.

ರಾಘವೇಂದ್ರನಾಗಿ ನಾನು ಊರಿಗೆ ಹೋದರೆ ಯಾರೂ ಕೂಡ ಅಲ್ಲಿ ರಾಘವೇಂದ್ರ ಅಂತ ಈಗ ನನ್ನ ನಂಬಲು ರೆಡಿಯಿಲ್ಲ. ಅನುಬಂಧ ಅವಾರ್ಡ್ಸ್‌ ಶೋನಲ್ಲಿ ಕೂಡ ಕಲಾವಿದರಿಗೆ ಊಟ ಹಾಕುವ ವೇಳೆ ನನ್ನನ್ನು ಕಲಾವಿದ ಅಲ್ಲ ಎಂದು ಊಟ ಹಾಕಲು ರೆಡಿ ಇರಲಿಲ್ಲ. ಆಮೇಲೆ ನಿರ್ಮಾಪಕರನ್ನು ಕರೆಸಿ ನಾನೇ ರಾಘವೇಂದ್ರ ಅಂತ ಹೇಳಿಸಲಾಯಿತು, ಆಮೇಲೆ ಊಟ ಹಾಕಿದರು ಎಂದು ರಾಘವೇಂದ್ರ ಹೇಳಿದ್ದಾರೆ.

ಮಜಾ ಭಾರತ ರಿಯಾಲಿಟಿ ಶೋನಲ್ಲಿ ನನಗೆ ಮೊದಲ ಬಾರಿಗೆ ಹುಡುಗಿ ಪಾತ್ರ ನೀಡಿದರು. ಎರಡನೇ ವಾರ, ಮೂರನೇ ವಾರವೂ ನನಗೆ ಹುಡುಗಿ ಪಾತ್ರ ಸಿಗುತ್ತಿತ್ತು. ಪದೇ ಪದೇ ಹೆಣ್ಣಿನ ಪಾತ್ರವನ್ನು ಕೊಡುತ್ತಿರುವುದನ್ನು ನೋಡಿ ಕೊನೆ ತನಕವೂ ಹೆಣ್ಣಿನ ಪಾತ್ರ ಬಿಟ್ಟು ಬೇರೆ ಪಾತ್ರಗಳನ್ನು ಕೊಡುವುದೇ ಇಲ್ಲವಾ ಎಂದು ಯೋಚನೆಯಾಗಿತ್ತು. ಇನ್ನು ನನಗೆ 25 ವರ್ಷವಾದರೂ ಮನೆಯ ಸಮಸ್ಯೆಯಿಂದಾಗಿ ಯಾರನ್ನು ಪ್ರೀತಿಸುವ ಮನಸ್ಸು ಬರಲಿಲ್ಲ ಎಂದಿದ್ದಾರೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.

Post a Comment

0Comments

Post a Comment (0)