ತುಳುಜಾ ಭವಾನಿ ಮಂದಿರದಲ್ಲಿ 1 ಲಕ್ಷ ಕಡ್ಲೆ ಕಾಳಿ ನಿಂದ ಶಿವಲಿಂಗ.

Udayavani News
0
ತುಳುಜಾ ಭವಾನಿ ಮಂದಿರದಲ್ಲಿ 1 ಲಕ್ಷ ಕಡ್ಲೆ ಕಾಳಿ ನಿಂದ   ಶಿವಲಿಂಗ.


ಲಿಂಗಸೂಗೂರು ಪಟ್ಟಣದ ತುಳುಜಾ ಭವಾನಿ ಮಂದಿರದಲ್ಲಿ  1 ಲಕ್ಷ ಕಡ್ಲೆ ಕಾಳಿ ನಿಂದ   ಶಿವಲಿಂಗವನ್ನು ತಯಾರಿಸಿ  ವಿನುತನವಾಗಿ  ಮಹಾಶಿವರಾತ್ರಿ ಹಬ್ಬವನ್ನು ಸಂಭ್ರಮದಿಂದ ದೇವಸ್ಥಾನದ ಆಡಳಿತ ಮಂಡಳಿ  ಪ್ರತಿವರ್ಷ ವಿಶೇಷವಾಗಿ ಆಚರಣೆ  ಮಾಡುತ್ತ ಬಂದಿದ್ದಾರೆ ಬೆಳಗ್ಗೆಯಿಂದಲೇ ಶಿವನ ದರ್ಶನ ಪಡೆಯಲು ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ. ಈ 1 ಲಕ್ಷ ಕಡ್ಲೆ ಕಾಳು ಬಳಸಿ  ಶಿವಲಿಂಗ  ಈ ಬಾರಿ ಅತ್ಯಾಕರ್ಷಕವಾಗಿ ಕಣ್ಮನ ಸಳೆಯುತ್ತಿದ್ದು, ನಗರದ ಜನತೆ ಕಡ್ಲೆಕಾಯಿ ಶಿವಲಿಂಗವನ್ನು ನೋಡಿ     ವೈಶಿಷ್ಟತೆಗಳಿಂದ  ಆರಾಧನೆ ಮಾಡಲಾಗುತ್ತದೆ. ಪ್ರತಿ ಬಾರಿ ವಿಭಿನ್ನವಾಗಿ  ಶಿವಲಿಂಗ ತಯಾರಿಸುವ ಮೂಲಕ   ತುಳುಜಾ ಭವಾನಿ ಮಂದಿರದ ಆಡಳಿತ ಮಂಡಳಿ ಗಮನ ಸೆಳೆಯುತ್ತಾರೆ. ಈ ಬಾರಿ ಕಡ್ಲೆಕಾಳು. ಈ ಭಾಗದ ರೈತರು ಬೆಳೆಯುವ ಪ್ರಮುಖ ಬೆಳೆಯಲ್ಲೊಂದು. ಹೀಗಾಗಿ ಬರೋಬ್ಬರಿ 1 ಲಕ್ಷ  ಕಡ್ಲೆ ಕಾಳು  ಬಳಕೆ ಮಾಡಿ ಶಿವಲಿಂಗ ಪ್ರತಿಷ್ಠಾಪನೆ ಮಾಡಲಾಗಿದೆ‌.  ಅರಶಿಣ, ಕುಂಕುಮ ಮಿಶ್ರಿತವಾಗಿ ಶಿವಲಿಂಗವನ್ನು ಅಲಂಕಾರ ಮಾಡಲಾಗಿದ್ದು ನೋಡುಗರಿಗೆ ಭಕ್ತಿ-ಭಾವ ಉಕ್ಕಿಸುವಂತಿದೆ.
ಶಿವರಾತ್ರಿ ವಿಶೇಷ:ಇಂದು ನಾಡಿನೆಲ್ಲೆಡೆ ಶಿವರಾತ್ರಿ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಶಿವನ ನೆನೆಯುತ್ತಾ ಉಪವಾಸವಿದ್ದು ಆತನ ಆರಾಧನೆ ಮಾಡುವುದು ಹಿಂದೂಗಳಲ್ಲಿ ಮೊದಲಿನಿಂದಲೂ ಬಂದಿರುವ ಪದ್ಧತಿ. ಈ ದಿನದಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹಿಸುವುದಾಗಿ ಸ್ವತಃ ಶಿವನೇ ಜಗನ್ಮಾತೆ ಪಾರ್ವತಿ ದೇವಿಯ ಬಳಿ ಹೇಳಿಕೊಂಡಿರುವುದಾಗಿ ಶಿವ ಪುರಾಣ ತಿಳಿಸುತ್ತದೆ. ಜೊತೆಗೆ ಶಿವ-ಪಾರ್ವತಿ ವಿವಾಹವಾದ ಪವಿತ್ರ ದಿನ ಇದಾಗಿದೆ. ಹಿಮವಂತನ ಮಗಳು ಪಾರ್ವತಿ ದೇವಿ ಶಿವರಾತ್ರಿ ದಿನದಂದು ರಾತ್ರಿ ಇಡೀ ಶಿವನಾಮ ಪಠಿಸುತ್ತಾ ತಪಸ್ಸು ಮಾಡಿ ಪರಮಾತ್ಮನನ್ನು ಮೆಚ್ಚಿಸಿ ವಿವಾಹವಾದರು ಎಂಬುದಾಗಿ ಕಥೆಗಳು ಹೇಳುತ್ತವೆ.
ಈ ಸಂದರ್ಭದಲ್ಲಿ  ದೇವಸ್ಥಾನದ ಅರ್ಚಕರಾದ ತಿರುಮಲರವು,  ಕೃಷ್ಣ,  ಗೌತಮ್ ಕುಮಾರ, ಅನಂದ ರಾವು ಅಶೋಕ, ದಶರಥರಾವು  , ರಾಜೇಶ್, ಅಂಬಾಜಿ, ಸತ್ಯನಾರಾಯಣ, ಶಾಮಕುಮಾರ್, ಶಿಲ್ಪಾ, ಭಕ್ತಾದಿಗಳು ಉಪಸ್ಥಿತರಿದ್ದರು.

Post a Comment

0Comments

Post a Comment (0)