ಹುಣಸಗಿ ತಾಲೂಕಿನಲ್ಲಿ ಸಂಬಂಧಿಸಿದಂತೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ನಡೆಯುತ್ತಿರುವ ಲೆಕ್ಕಪರಿಶೋಧನ ಗ್ರಾಮ ಸಭೆಯಲ್ಲಿ ಆಗುತ್ತಿರುವ ಅನ್ಯಾಯದ ಕುರಿತು ನೆರವು ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಸಂಘ ಹುಣಸಗಿ ತಾಲೂಕು ಅಧ್ಯಕ್ಷರಾದ ಶಿವು ರಾಠೋಡರವರು, ಯಾದಗಿರಿ ಜಿಲ್ಲೆಯ ಜಿಲ್ಲಾ ಪಂಚಾಯಿತ ಸಿ.ಇ.ಓ ರವರಾದ ಲಿವೀಶ್ ಓರ್ಡಿಯಾರವರಿಗೆ ಭೇಟಿ ನೀಡಿ ಮನವಿ ಸಲ್ಲಿಸಿದರು.
ತಾಲೂಕಿನಲ್ಲಿ ಆಗುತ್ತಿರುವ ಗ್ರಾಮ ಪಂಚಾಯಿತ ಲೆಕ್ಕ ಪರಿಶೋಧನೆ ವರದಿ ಮಂಡಿಸುವಲ್ಲಿ ಒಂದು ಕಾನೂನು ನಿಯಮಗಳನ್ನು ಪಾಲಿಸದೆ, ಮನಸೋ- ಇಚ್ಛೆ ಬಂದತ್ತೆ. ಪಿ.ಡಿ.ಓ. ಹಾಗೂ ಲೆಕ್ಕ ಪರಿಶೋಧನಾ ವರದಿಗಾರ ಹುಣಸಗಿ ಅಧಿಕಾರಿಗಳಾದ ಸಿದ್ದನಗೌಡ ಪಾಟೀಲ್, ಇವರಿಬ್ಬರು ಸೇರಿ ನಮ್ಮ ಹುಣಸಗಿ ತಾಲೂಕಿನ ಎಲ್ಲ ಕಾರ್ಮಿಕರಿಗೆ ಅನ್ಯಾಯ ಮಾಡಿರುವದರಿಂದ ಇವರ ಮೇಲೆ ಕಾನೂನು ಕ್ರಮ ಜರಗಿಸಬೇಕು ಎಂದು ಧಾಖಲೆಯ ಸಮೇತ ಯಾದಗಿರಿ ಜಿಲ್ಲೆಯ ಜಿಲ್ಲಾ ಪಂಚಾಯಿತ ಸಿ.ಇ.ಓ ರವರಾದ ಲಿವೀಶ್ ಓರ್ಡಿಯಾನವರಗೆ ಹುಣಸಗಿಯಲ್ಲಿ ಆಗುತ್ತಿರುವ ಅನ್ಯಾಯದ ಬಗ್ಗೆ ತಿಳಿಸಿದರು.
ಗ್ರಾಮ ಪಂಚಾಯತ್ತಿ ಲೆಕ್ಕಪರಿಶೋಧನ ಗ್ರಾಮ ಸಭೆಯಲ್ಲಿ ಕಾರ್ಮಿಕರಿಗೆ ಅನ್ಯಾಯ ಮಾಡಿದ್ದಾರೆ ಹಾಗೆ ಯಾವುದೆ ಕಾನೂನು ನಿಯಮಗಳನ್ನು ಪಾಲಿಸದೆ ಇರುವದರಿಂದ ನಮ್ಮ ಭಾಗದ ಜನರಿಗೆ ಲೆಕ್ಕ ಪರಿಶೋಧನಾ ವರದಿ ಅಧಿಕಾರಿಗಳು ಸಿದ್ದನಗೌಡ ಪಾಟೀಲ್ ಸಂಪೂರ್ಣ ವಿವರಸಿದೆ ಗ್ರಾಮ ಸಭೆಗಳನ್ನು ಕೇವಲ 40 ನಿಮಿಷದಲ್ಲಿ ಮುಗಿಸುತ್ತಾರೆ ಎಂದು ಆರೋಪ ಮಾಡಿದ್ದರು.
ಈ ವಿಚಾರವಾಗಿ ಯಾದಗಿರಿ ಜಿಲ್ಲಾ ಪಂಚಾಯಿತ ಸಿ.ಇ.ಓ ಲಿವೀಶ್ ಓರ್ಡಿಯನವರಿಗೆ ನೆರವು ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಸಂಘದ ಅಧ್ಯಕ್ಷರು ಶಿವು ರಾಠೋಡರವರು ವಿವರಿಸಿ ದಾಖಲೆಗಳ ಸಮೇತ ಅವರಿಗೆ ತಲುಪಿಸುವ ಕೆಲಸ ಮಾಡಿದ್ದಾರೆ.
ಇದೇ ರೀತಿ ಮುಂದವರೆದಲ್ಲಿ ನಮ್ಮ ಹುಣಸಗಿ ತಾಲೂಕಿಗೆ ಸಂಬಂಧಪಟ್ಟ ಎಲ್ಲಾ ಪಂಚಾಯತಿಗಳಿಗೆ ಕಾರ್ಮಿಕರು ಒಗ್ಗಟ್ಟಾಗಿ ಮುತ್ತಿಗೆ ಹಾಕುತ್ತೇವೆ. ಎಂದು ನೆರವು ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಸಂಘದ ಅಧ್ಯಕ್ಷರು ಶಿವು ರಾಠೋಡರವರು ಮನವರಿಕೆ ಮಾಡಿದರು.
ಸಂದರ್ಭದಲ್ಲಿ ಸುರುಪುರು ಇ.ಓ . ಬಸವರಾಜ್ ಸಜ್ಜನ್, ಹುಣಸಗಿ ಇ.ಓ. ಬಸಣ್ಣ ನಾಯಕ್, ಯಾದಗಿರಿ ಜಿಲ್ಲಾ ಯೋಜನಾ ನಿರ್ದೇಶಕರಾದ ಸಿ.ಬಿ. ದೇವರಮನಿ ಹಾಗೂ ಸುರಪುರ ಮತ್ತು ಹುಣಸಗಿ ತಾಲೂಕಿನ ಪಿ.ಡಿ.ಓಗಳು ಸಮ್ಮುಖದಲ್ಲಿ ಮನವಿಯನ್ನು ಸಲ್ಲಿಸಲಾಯಿತು.