ನಾಗಬೇನಾಳ, ಈ ಹಿಂದೆ ಸಾಕಷ್ಟು ಗ್ರಾಮ ಸಭೆ, ವಾರ್ಡ ಸಭೆ ಮಾಡಿದ್ದೀರಿ ಸಾರ್ವಜನೀಕರಿಂದ ಬಂದ ಸಮಸ್ಯೆಗಳು ನೂರಾರು ಬರೆದುಕೊಂಡು ಹೋಗಿದ್ದೇ ಆಯ್ತು ಆದರೆ ಅವುಗಳನ್ನು ಕಾರ್ಯ ರೂಪಕ್ಕೆ ತಂದಿದ್ದೀರಾ? ಇವತ್ತಿನ ಗಾಮ ಸಭೆಯೂ ನಮಗೆ ಬೇಡ ಮೊದಲು ರದ್ದುಗೊಳಿಸಿ ಎಂದು ಅಕ್ರೋಶ ವ್ಯಕ್ತಪಡಿಸಿದ ಸಾರ್ವಜನೀಕರ ಮಾತಿಗೆ ಬಗ್ಗಿದ ಅಧಿಕಾರಿಗಳು ಕೊನೆಗೂ ಗ್ರಾಮ ಸಭೆಯನ್ನು ಮುಂದೂಡಿದ ಪರಿಣಾಮ ಬಂದ ಹಾದಿಗೆ ಸುಂಕವಿಲ್ಲ ಎಂಬಂತೆ ಅಧಿಕಾರಿಗಳು ಮರಳಿದ ಪ್ರಸಂಗ ಸಮೀಪದ ನಾಗಬೇನಾಳ ಗ್ರಾ.ಪಂ ಯಲ್ಲಿ ನಡೆಯಿತು.
ಸಾರ್ವಜನೀಕರ ಆರೋಪ: ಸುಮಾರು ವರ್ಷಗಳಿಂದಲೂ ಗ್ರಾ.ಪಂ ವ್ಯಾಪ್ತಿಯ ಹಳ್ಳಿಗಳಲ್ಲಿ
ಸಮರ್ಪಕವಾಗಿ ಕುಡಿಯಲು ನೀರು ಒದಗಿಸುತ್ತಿಲ್ಲ, ಬೆಳಕಿನ ವ್ಯವಸ್ಥೆಯೂ ಇಲ್ಲ. ಆಸರೆ ಮನೆಗಳನ್ನು | I ನಿಯಮಾನುಸಾರವಾಗಿ ಹಂಚಿಕೆ ಮಾಡಿ ಬಡವರಿಗೆ ಅನುಕೂಲ ಕಲಿಸುತ್ತಿಲ್ಲ. ಪಕ್ಕದಲ್ಲೇ ನದಿ ಹರಿಯುತ್ತಿದ್ದರೂ ನಾಗಬೇನಾಳ ತಾಂಡೆಯಲ್ಲಿ ಕುಡಿಯುವ ನೀರಿಲ್ಲ, ದೂರದ ಹಳ್ಳ ಕೊಳ್ಳದಿಂದ ನೀರು ತರಬೇಕಿದೆ. ಕೋಟಿಗಟ್ಟಲೇ ಹಣ ವ್ಯಯಿಸಿ ಜೆಜೆಎಂ ನಿಂದ ಪ್ರತಿ ಮನೆಗೂ ನೀರು ಒದಗಿಸಬೇಕಿದ್ದರೂ ಜೆಜೆಎಂ ಕಾಮಗಾರಿ ಮುಗಿಯದೇ ಗ್ರಾ.ಪಂ ಯವರು ಮುಗಿದಿದೆ ಎಂದು ತಮ್ಮ ವಶಕ್ಕೆ ಪಡಿಸಿಕೊಂಡಿದ್ದೀರಿ ಯಾರ ಮನೆಗಾದರೂ ಈವರೆಗೆ ನೀರು ಬಂದಿದೆಯಾ ಎಂದು ಪ್ರಶ್ನಿಸಿದರು.
ಖಾಸಗಿ ನೀರು: ಕರ ಮಾತ್ರ ಕಟ್ಟಿಸಿಕೊಳ್ಳುತ್ತಿದ್ದಾರೆ ಗ್ರಾ.ಪಂ ಮೂಲಕ ನಮಗೆ ನೀರೇ ಸಿಗುತ್ತಿಲ್ಲ, ಹೊಲ
ಗದ್ದೆಗಳಿಗೆ ತೆರಳಿ ಖಾಸಗಿ ನೀರು ಕುಡಿಯುತ್ತಿದ್ದೇವೆ. ಆರೇಶಂಕರ ಗಾಮದಲ್ಲೂ ಸಹ ಜೆಜೆಎಂ ನೀರು ಸಿಗುತ್ತಿಲ್ಲ ಆದರೂ 40 ಲಕ್ಷ ಪೋಲಾಗಿದೆ. ಈಗಿರುವ ಪಿಡಿಓ ಗಳಿಗೂ ಗಮನಕ್ಕೆ ತಂದಿದ್ದೇವೆ ಎಂದು ಆರೋಪಿದರು. ನರೇಗಾದಡಿ ಕಾಮಗಾರಿಗಳೇ ಆಗುತ್ತಿಲ್ಲ ಸುಮಾರು ವರ್ಷಗಳಿಂದ ಯಾವದೇ ಅಭಿವೃದ್ಧಿ ಕಂಡಿಲ್ಲ ಸರಕಾರದ ಅನುದಾನ ಖರ್ಚು ಮಾಡುತ್ತಲೇ ಇದ್ದಾರೆ. ವಾಟರ್‌ಮೆನ್ ಗಳ ಕೊರತೆ ಇದ್ದರೂ ಹುದ್ದೆಗಳನ್ನು ತುಂಬುತ್ತಿಲ್ಲ. ಕೋರಂ ಭರ್ತಿಯಾಗದೇ ಸಭೆ ನಡೆಸುತ್ತಾರೆ. ಈ ಹಿಂದೆ ಸಭೆಯಲ್ಲಿ 120 ಮನೆಗಳನ್ನು ಆಯ್ಕೆ ಮಾಡಿದರೂ ಈವರೆಗೂ ಆ ಮನೆಗಳು ಮದ್ಯವರ್ತಿಗಳ ಹಾವಳಿಯಿಂದ ನನೆಗುದಿಗೆ ಬಿದ್ದಿವೆ. ಜಿಪಿಎಸ್ ಮಾಡಲೂ ಹಣ ಕೊಡಬೇಕು ಎಂದು ಸಾರ್ವಜನೀಕರು ಒಟ್ಟಾರೆ ನಮ್ಮ ಗ್ರಾಪಂ ಗೆ ಯಾವ ಮೇಲಾಧಿಕಾರಿಗಳು ಗಮನ ಹರಿಸುತ್ತಿಲ್ಲ ಕರ್ನಾಟಕದಲ್ಲೇ ಅತ್ಯಂತ ಕಳಪೆ ಆಡಳಿತ ಮತ್ತು ಅಭಿವೃದ್ಧಿ ವಂಚಿತ ಗ್ರಾ.ಪಂ ಎಂದು ಮೌನೇಶ ಮಾದರ, ಮಾನಪತಿ, ಆನಂದ ನಾಯಕ, ಬೈಲಪ್ಪ ಗೌಂಡಿ, ಚನ್ನಬಸಪ್ಪ ಕೋಳೂರ, ಚಂಡು, ಹನಮಂತ ಗೌಂಡಿ, ಸುರೇಶ ಪಾಟೀಲ, ಸಂಗಪ್ಪ, ಶಾಂತಪ್ಪ ಪಾಟೀಲ, ಲಕ್ಷ್ಮಣ ರಾಠೋಡ, ಅಕಾಶ ರಾಠೋಡ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ತಾ.ಪಂ ಎಡಿ ಪಿ.ಎಸ್.ಕಸನಕ್ಕಿ, ಪಿಡಿಓ ಮುರಿಗೆಮ್ಮ ಪೀರಾಪೂರ, ಗ್ರಾ.ಪಂ. ಅಧ್ಯಕ್ಷೆ ಶಕುಂತಲಾ ಕಾಜಗಾರ, ಹೆಸ್ಕಾಂನ ಸಜ್ಜನ, ಕೃಷಿ ಇಲಾಖೆಯ ಬಿ.ಎಸ್.ಸಾವಳಗಿ, ಕಾರ್ಯದರ್ಶಿ ಟಿ.ಎಂ.ಕೋಲಕಾರ ಸೇರಿದಂತೆ ಸದಸ್ಯರಿದ್ದರು.
ಜಿಲ್ಲಾ ವರದಿ : ಶಿವು ರಾಠೋಡ್