ರೈತರಿಗೆ ಸೂಕ್ತ ಪರಿಹಾರ ನೀಡಲು ಪಂಚಯ್ಯ ಸ್ವಾಮಿ ಆಗ್ರಹ.

Udayavani News
0


ಜೇವರ್ಗಿ ನ 27, ಜೇವರ್ಗಿ ತಾಲೂಕಿನಲ್ಲಿ ಹಾದುಹೋದ NH150 ರ ಕಾಮಗಾರಿ PNC ಕಂಪನಿ ನಿರ್ಮಿಸುತ್ತಿದೆ. ಈ ಕಂಪನಿಯ ಟಿಪ್ಪರಗಳು ಅನಧಿಕೃತವಾಗಿ ರೈತರು ಹೊಲಗಳಲ್ಲಿ ಓಡಾಡಿಸಿ ಹತ್ತಿ ತೊಗರಿ ಜೋಳ ಬೆಳೆಗಳು ಹಾಳಾಗಿದೆ ಮತ್ತು ಟಿಪ್ಪರಗಳ ಓಡಾಟದಿಂದ ದಟ್ಟವಾದ ದೂಳು ಎದ್ದು ಹತ್ತಿ ಬೆಳೆ ಹಾಳಾಗಿದೆ ಮಾರುಕಟ್ಟೆಯಲ್ಲಿ ಹತ್ತಿ ಖರೀದಿ ಮಾಡಲು ವರ್ತಕರು ನಿರಾಕರಿಸುತ್ತಿದ್ದಾರೆ ಆದ್ದರಿಂದ PNC ಕಂಪನಿ ಕಡೆಯಿಂದ ರೈತರಿಗೆ ಸೂಕ್ತವಾದ ಪರಿಹಾರ ಕೊಡಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕ ಅಧ್ಯಕ್ಷ ಪಂಚಯ್ಯ ಸ್ವಾಮಿ ಹಿರೇಮಠ ಅವರು ಜೇವರ್ಗಿ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದರು.ಒಂದು ವೇಳೆ ರೈತರಿಗೆ PNC ಕಂಪನಿಯಿಂದ ಸಮರ್ಪಕ ಪರಿಹಾರ ಸಿಗದಿದ್ದರೆ ಉಗ್ರ ಹೋರಾಟ ಮಾಡುವದಾಗಿ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಶರಣು ಬಮನಳ್ಳಿ ರೈತ ಮುಖಂಡರುಗಳಾದ ಸಿದ್ದಣ್ಣಗೌಡ ಮಾವನೂರ ಪರಮೇಶ್ವರ್ ಬಿರಾಳ ರಮೇಶ ರಾಠೋಡ ಸುನಿಲ್ ಚನ್ನುರ ಕೃಷ್ಣ ರಾಠೋಡ ಗೋಪಾಲ ರಾಠೋಡ ಲಕ್ಷ್ಮಣ ಪವಾರ್ ಸಂತೋಷ ರಾಠೋಡ ಡಾ. ಶಿವರಾಜ್ ಪಾಟೀಲ ಹರವಾಳ ಚಂದಪ್ಪ ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


✍️ಸಿದ್ದನಗೌಡ ಬಿರೇದಾರ

Post a Comment

0Comments

Post a Comment (0)