ಲಿಂಗಸ್ಗೂರು ವಲಯ ಮಟ್ಟದ ವಾಲಿಬಾಲ್ ಕ್ರೀಡೆಗೆ ಪ್ರಕಾಶಮ್ಮ ಮುರಾರಿ ಚಾಲನೆ

Udayavani News
0

ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ
UDAYAVANI NEWS 
ಮಸ್ಕಿ , ಡಿಸೆಂಬರ್ 21 : ಪಟ್ಟಣದಲ್ಲಿ ಮಂಗಳವಾರ ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಸಂತ ಜಾನರ ದೇವಾಲಯ ಚರ್ಚ್ ಆವರಣದಲ್ಲಿ ವಾಲಿಬಾಲ್ ಟೂರ್ನಮೆಂಟ್ ಕ್ರೀಡೆಗೆ ಪ್ರಕಾಶಮ್ಮ ಮುರಾರಿ ಚಾಲನೆ ನೀಡಿದರು.

ಮಂಗಳವಾರದಂದು ಸಂತ ಜಾನರ ದೇವಾಲಯ ಚರ್ಚ್ ಆವರಣದಲ್ಲಿ ಬೆಳಿಗ್ಗೆ ಲಿಂಗಸ್ಗೂರು ವಲಯದ ವಾಲಿಬಾಲ್ ಕ್ರೀಡೆಗೆ ಲಿಂಗಸ್ಗೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೇಸ್ ಸೇವಾಕಾಂಕ್ಷಿಯಾದ ಎಚ್. ಬಿ ಮುರಾರಿ ರವರೆ ಉದ್ಘಾಟನೆ ಮಾಡಬೇಕಿತ್ತು ಕಾರಣಾಂತರಗಳಿಂದ ಅವರ ಬದಲಾಗಿ ಧರ್ಮಪತ್ನಿ ಪ್ರಕಾಶಮ್ಮ ಮುರಾರಿ ರವರು ಕ್ರೀಡೆಯನ್ನು ಉದ್ಘಾಟಿಸಿ ಕ್ರೀಡಾಪಟುಗಳಿಗೆ ಶುಭ ಕೋರಿದರು.


ಇದೇ ಸಂದರ್ಭದಲ್ಲಿ

ವಂ.ಫಾದರ್ ರೆಮಿ ಜೋಶ್ ಯುವ ನಿರ್ದೇಶಕರು,
ವಂ.ಫಾದರ್ ಜೇವಿಯರ್ ರವಿ ಲಿಂಗಸ್ಗೂರು ವಲಯ ನಿರ್ದೇಶಕರು, ವಂ.ಸಿಸ್ಟರ್. ಸೋನಿಯಾ ಡಿಸೋಜಾ ಲಿಂಗಸ್ಗೂರು ವಲಯ ನಿರ್ದೇಶಕರು,ಲಿಸ್ಸಿ ಜಾನ್ ಬಳ್ಳಾರಿ ಧರ್ಮ ಕೇಂದ್ರದ ಯುವ ಉಪಾಧ್ಯಕ್ಷೆ,ಕುಮಾರ್ ಹಿರೇ ಕಡಬೂರು ಯುವ ಅಧ್ಯಕ್ಷರು,ಜಯಪ್ಪ ಶಿಕ್ಷಕರು,ಮಲ್ಲಪ್ಪ ವಕೀಲರು, ಮೌನೇಶ್ ಮೆದಿಕಿನಾಳ, ಸುರೇಶ್ ಕಾಟಗಲ್,ಈರಪ್ಪ ಶಿಕ್ಷಕರು, ಪಂದ್ಯ ನಿರ್ಣಯಕರಾದ ಮೋಹನ್ , ಜಾಫರ್ ಮಿಯಾ ಸೇರಿದಂತೆ ಲಿಂಗಸ್ಗೂರು ವಲಯ ಧರ್ಮ ಕೇಂದ್ರದ ಕ್ರೀಡಾ ಪಟುಗಳು ಇದ್ದರು.


 


Post a Comment

0Comments

Post a Comment (0)