ಮೀಟರ್ ದಂಧೆ, ಬೆಟ್ಟಿಂಗ್ ದಂಧೆ, ಮಟ್ಕಾ ದಂಧೆಯನ್ನು, ಜೆಡಿಎಸ್ ಪಕ್ಷ ಅಧಿಕಾರ ಬಂದರೆ ಸಂಪೂರ್ಣ ಬಂದ್ ಮಾಡಲಾಗುವುದು ಎಚ್. ಡಿ. ಕುಮಾರಸ್ವಾಮಿ

Udayavani News
0
ವರದಿ - ರಾಜೇಂದ್ರ ಪ್ರಸಾದ್ ಕಲಬುರ್ಗಿ
ಕಲಬುರ್ಗಿ, ಸೆ.21 : ಕರ್ನಾಟಕ ಜನತೆ ಒಂದು ವೇಳೆ ಸಂಪೂರ್ಣವಾಗಿ ಜೆಡಿಎಸ್ ಪಕ್ಷಕ್ಕೆ ಬಹುಮತ ಪಡೆದು ಅಧಿಕಾರಕ್ಕೆ ಬಂದರೆ ಮೀಟರ್ ದಂಧೆ, ಮಟ್ಕಾ ದಂಧೆ, ಬೆಟ್ಟಿಂಗ್ ದಂಧೆ, ಗಳು ಸಂಪೂರ್ಣ ಬಂದ್ ಮಾಡಲಾಗುವುದು ಏಕೆಂದರೆ ಈ ಅಕ್ರಮ ದಂಧೆ ಗಳಿಂದ ಸಾವು ನೋವು ಇಂದು ಕಾಣುತ್ತಿದ್ದೇವೆ, 
ಚಿಂಚೋಳಿಯ ಪೊಲೀಸ್ ಪರೇಡ್ ಮೈದಾನದಲ್ಲಿ ಬೃಹತ್ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಎಚ್. ಡಿ. ಕುಮಾರಸ್ವಾಮಿ ಅವರು ಮಾತನಾಡಿ ನಾನು ಮುಖ್ಯಮಂತ್ರಿ ಆಗಿದ್ದಾಗ ಗ್ರಾಮ ವಾಸ್ತವ್ಯ ಎಂಬ ಹೊಸ ಕಾರ್ಯಕ್ರಮ ಪ್ರಾರಂಭ ಮಾಡಿ ಹಳ್ಳಿಗಳಲ್ಲಿನ ಸಮಸ್ಯೆ ಮುಕ್ತಿ ಮಾಡಿದ್ದೆ , ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ 5 ವರ್ಷ ಅಧಿಕಾರ ನಮ್ಮ ಪಕ್ಷಕ್ಕೆ ಕೊಟ್ಟರೆ,ಪಂಚ ರತ್ನ ಎಂಬ ಕಾರ್ಯಕ್ರಮ ಜಾರಿಗೆ ತಂದು ಪ್ರತಿ ಮಕ್ಕಳಿಗೆ ಉದಯ ತರಗತಿಯಿಂದ 12 ನೇ ತರಗತಿವರೆಗೆ ಉಚಿತ ಶಿಕ್ಷಣ,ಪ್ರತಿ ರೈತರ ಹೊಲಗಳಿಗೆ ನೀರು ಬರುವಂತೆ ಮಾಡುವುದು ,ನಿರಂತರವಾಗಿ ವಿದ್ಯುತ್ ಪೂರೈಕೆ ,ಪ್ರತಿ ಹಳ್ಳಿಗಳಲ್ಲಿ ಶೌಚಾಲಯಗಳ ನಿರ್ಮಾಣ , ಕರ್ನಾಟಕದ ಪ್ರತಿಯೊಬ್ಬ ರೈತನಿಗೆ ಸಾಲಗಾರರಾಗದೆ ಅವರ ಜೀವನ ಮಟ್ಟವನ್ನು ಸುಧಾರಿಸುವುದು , ಮುಂದಿನ ಉಜ್ವಲ ಮಕ್ಕಳ ಭವಿಷ್ಯಕ್ಕಾಗಿ ಒಂದು ಬಾರಿ ನಮಗೆ ಅವಕಾಶ ನೀಡಬೇಕು ಎಂದು ಹೇಳಿದರು .
ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ
 ಸಿ. ಎಂ. ಇಬ್ರಾಹಿಂ  
ದಿ. ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲರು ನನ್ನ ರಾಜಕೀಯ ಗುರು ಎಂದು ಸ್ಮರಿಸುತ್ತಾ, ಮಾತನಾಡಿ ಈ ಬಿಜೆಪಿ ಸರ್ಕಾರ 20% ರಿಂದ 40% ಪ್ರತಿಶತ ಲಪುಟ್ಟ ಸರಕಾರ, ಕಾಂಗ್ರೆಸ್ ನವರು ಬೊಬ್ಬೆ ಹೊಡೆಯುತ್ತಿದ್ದಾರೆ, ಈ ಎರಡೂ ರಾಷ್ಟ್ರೀಯ ಪಕ್ಷಗಳು ಪ್ರತಿಶತ ಸರಕಾರವಿದ್ದು ಇವರಿಬ್ಬರ ಕಚ್ಚಾಟವನ್ನು ನಾವು ನೋಡುತ್ತಿದ್ದೇವೆ , ನನ್ನ ಕೆಲಸ ಕಂತಿ ಭಿಕ್ಷೆ ಬೇಡುವಂತಾಗಿದೆ ಉತ್ತಮೋತ್ತಮ ನಾಯಕರನ್ನು ನಾನು ಭಿಕ್ಷೆ ಮುಖಾಂತರ ಕೇಳಿಕೊಂಡು ನಮ್ಮ ಜೆಡಿಎಸ್ ಪಕ್ಷವನ್ನು ಬೆಳೆಸುತ್ತಿದ್ದೇನೆ ಅದೇ ರೀತಿಯಾಗಿ ಹೊಸ ಹೊಸ ನಾಯಕರು ಕೂಡ ಈ ಪಕ್ಷದಲ್ಲಿ ಉದಯಿಸುತ್ತಿದ್ದಾರೆ ಮುಂಬರುವ ದಿನಗಳಲ್ಲಿ ಉಜ್ವಲವಾದ ಭವಿಷ್ಯ ಈ ಜೆಡಿಎಸ್ ಪಕ್ಷಕ್ಕಿದೆ ಎಂದರು.
ಕ್ಷಣ ಕ್ಷಣದ ಸುದ್ದಿ ಕೆಳಗಿನ ಜನಸ್ಪಂದನ ವಾಟ್ಸಾಪ್ ಗುಂಪಿನ ಲಿಂಕ್ ಬಳಸಿರಿ. 
https://chat.whatsapp.com/EnPflH1YdrTKgr8itRlTe9

ಸುದ್ಧಿಯ ಲಿಂಕ್ ಓಪನ್ ಆಗದಿದ್ದರೆ *'9008329745'* ನಂಬರನ್ನು *'UDAYAVANI. NEWS'* ಎಂದು ಸೇವ್ ಮಾಡಿಕೊಳ್ಳಿ.

Post a Comment

0Comments

Post a Comment (0)