ಮಸ್ಕಿ, ಸೆ.18 : ಅಂದಿನಬಕೇಂದ್ರದ ಗೃಹಸಚಿವರಾಗಿದ್ದ ಪಟೇಲರ ಬಿಗಿನಿಲುವಿನಿಂದ ಹೈದ್ರಾಬಾದ್ ಕರ್ನಾಟಕ ಭಾರತದಲ್ಲಿ ವಿಲೀನವಾಗಿ ನಿಜಾಮನಿಂದ ಸ್ವತಂತ್ರವಾಯಿತು.
ಹಲವು ಸ್ವತಂತ್ರಹೋರಾಟಗಾರರ ತ್ಯಾಗಬಲಿದಾನವನ್ನು ನಾವು ಸ್ಮರಿಸಿ ಗೌರವಿಸಿ ಅವರ ಆಶಯಗಳನ್ನು ಅಳವಡಿಸಿಕೊಂಡು ಪಾಲಿಸಬೇಕು ಎಂದು ಮಸ್ಕಿಯ ಶಾಸಕ ಆರ್,ಬಸನಗೌಡ ತುರುವಿಹಾಳ ಹೇಳಿದರು.
ಇಂದು ಮಸ್ಕಿಯ ಕೇಂದ್ರಶಾಲಾ ಆವರಣದಲ್ಲಿ ತಸಲೂಕಾಡಳಿತ ಹಾಗೂ ಪುರಸಭೆಯಿಂದ ಆಯೋಜಿಸಲಾಗಿದ್ದ 75 ನೇ ಕಲ್ಯಾಣಕರ್ನಾಟಕ ಉತ್ಸವದ ವೇಧಿಕೆಯ ಅಧ್ಯಕ್ಷಸ್ಥಾನ ವಹಿಸಿ,ವಿಶೇಷ ಚೇತನರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಿ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದರು.
ನಂತರ ತಹಶೀಲ್ದಾರರಾಗಿರುವ ಕವಿತಾ ಆರ್ ರವರು ಧ್ವಜವಂದನೆ ಸ್ವೀಕರಿಸಿ ಮಾತನಾಡಿ 1947 ರಲ್ಲಿ ಭಾರತ ಬ್ರಿಟೀಷರಿಂದ ಸ್ವತಂತ್ರವಾದರೂ ಹೈದ್ರಾಬಾದ್ ಪ್ರಾಂತ್ಯ ನಿಜಾಮನ ವ್ಯತಿರಿಕ್ತ ನಿರ್ಧಾರದಿಂದ ಸ್ವತಂತ್ರವಾಗದೆ ಇಲ್ಲಿನ ಜನ ನರಕಯಾತನೆಯನ್ನು ಅನುಭವಿಸಬೇಕಾಯಿತು.
ಹಲವು ಹೋರಾಟಗಾರರ ತ್ಯಾಗಬಲಿದಾನ ವೀರಾವೇಷದ ಹೋರಾಟದ ಫಲವಾಗಿ ಹೈದ್ರಾಬಾದ್ ಸಂಸ್ಥಾನ 1948 ಸೆ,17 ರಂದು ಸ್ವತಂತ್ರವಾಗುವ ಮೂಲಕ ಇಲ್ಲಿಯ ಜನ 13 ತಿಂಗಳುಗಳ ನಂತರ ಸ್ವತಂತ್ರವಾಗುವ ಮೂಲಕ ಭಾರತದೊಂದಿಗೆ ವಿಲೀನವಾಯಿತು.
ಹಿರಿಯರ ಈ ಬಳುವಳಿಯನ್ನು ನಾವು ವ್ಯರ್ಥ ಮಾಡಿಕೊಳ್ಳದೆ ನಿಜಾರ್ಥದ ಸ್ವಾತಂತ್ರ್ಯವನ್ನು ಅನುಭವಿಸಬೇಕೆಂದು ಕಿವಿಮಾತನ್ನು ಹೇಳಿದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಉಪನ್ಯಾಸಕ ಸುರೇಶ ಬಳಗಾನೂರು ಕಲ್ಯಾಣಕರ್ನಾಟಕವೆಂದು ಹೆಸರು ಬದಲಾದರಷ್ಟೇ ಸಾಲದು ಇಲ್ಲಿನ ಜನರ ಬದುಕು ಕಲ್ಯಾಣವಾಗಬೇಕು,371( j) ಕಲಂ ನ ಸಮರ್ಪಕ ಅನುಷ್ಠಾನವಾಗಿ ಇಲ್ಲಿನ ಯುವಕ ಯುವತಿಯರ ನಿರುದ್ಯೋಗ ದೂರವಾಗಿ ಸ್ವಾವಲಂಬೀ ಬದುಕು ಸಾಗಿಸುವಂತಾದಾಗ ಈ ಪರಿಶ್ರಮ ಸಾರ್ಥಕವಾಗುತ್ತದೆ.
ಬೀದರ್,ಕಲಬುರ್ಗಿ,ಯಾದಗಿರಿ, ಬಳ್ಳಾರಿ, ರಾಯಚೂರು ಭಾಗದ ಹೋರಾಟಗಾರರ ನರಕಯಾತನೆಯ ಫಲವಾಗಿ ದೊರೆತ ಸ್ವಾತಂತ್ರ್ಯ ನಮ್ಮಿಂದ ಸಂರಕ್ಷಿಸಲ್ಪಟ್ಟು ಮುಂದಿನ ಪೀಳಿಗೆಗೆ ಬಳುವಳಿಯಾಗಬೇಕು.ಆ ಜವಾಬ್ದಾರಿ ನಮ್ಮ ಹೆಗಲಮೇಲಿದೆ ಎಂದು ಹೇಳಿದರು.
ಈ ವೇಧಿಕೆಯಮೇಲೆ ಪುರಸಭೆಯ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ, ಆರಕ್ಷಕ ಉಪ ವೃತ್ತ ನಿರೀಕ್ಷಕರಾದ ಸಂಜೀವ ಬಳಿಗಾರ್,ವೈದ್ಯ ಬಸಲಿಂಗಪ್ಪ ದಿವಟರ್,ಜಿಲಾನಿ ಖಾಜಿ,ಅಬ್ದುಲ್ ಗನಿ ,ಸೇರಿದಂತೆ ಹಲವು ಮುಖಂಡರಿದ್ದರು.ಈ ಕಾರ್ಯಕ್ರಮದಲ್ಲಿ,ವಿವಿದ ಇಲಾಖೆಗಳ ಅಧಿಕಾರಿಗಳು, ಮುಖಂಡರು,ವಿವಿದ ಸಂಘಟನೆಗಳ ಪದಾಧಿಕಾರಿಗಳು,ಶಿಕ್ಷಕ ಉಪನ್ಯಾಸಕರು, ವಿದ್ಯಾರ್ಥಿಗಳು ಸೇರಿದಂತೆ ಹಲವರಿದ್ದರು.