ಮಸ್ಕಿ,ಸೆ.29 : ಕಾಂಗ್ರೇಸ್ ನಡೆ ಹಳ್ಳಿಯ ಕಡೆ ಎಂಬ ಮಹೋತ್ಸವವು ಪಾದಯಾತ್ರೆಯ ಮೂಲಕ ತಾಲೂಕಿನ ಬುದ್ದಿನ್ನಿ ಗ್ರಾಮದಿಂದ ಪ್ರಾರಂಭವಾಗಿ ಸಂತೆ ಕೆಲ್ಲೂರು ಗ್ರಾಮಕ್ಕೆ ಪಾದಯಾತ್ರೆಯು ಯಶಸ್ವಿಯಾಗಿ ಅಂತ್ಯಗೊಂಡಿತು.
ಕಾಂಗ್ರೇಸ್ ನಡೆ ಹಳ್ಳಿ ಕಡೆ ಎಂಬ ಮಹೋತ್ಸವದ ಪ್ರಯುಕ್ತ ಮಸ್ಕಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬುದ್ದಿನ್ನಿ ಗ್ರಾಮದಿಂದ ಪ್ರಾರಂಭವಾಗಿ ಗುಡಿಹಾಳ, ಮಟ್ಟೂರು, ಮಿಟ್ಟೆ ಕೆಲ್ಲೂರು, ಕುಣೆ ಕೆಲ್ಲೂರು, ಸಂತೆ ಕೆಲ್ಲೂರು ವರೆಗೆ ಪಾದ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ತಾಲೂಕ ಕಾಂಗ್ರೆಸ್ ನಾಯಕರು ಮತ್ತು ಪದಾಧಿಕಾರಿಗಳು ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಪಾದಯಾತ್ರೆಯಲ್ಲಿ
ವಿಧಾನ ಪರಿಷತ್ ಸದಸ್ಯರಾದ ಶರಣಗೌಡ ಪಾಟೀಲ್ ಬಯ್ಯಾಪುರ,ಆರ್.ಬಸನಗೌಡ ತುರ್ವಿಹಾಳ ಜನಪ್ರಿಯ ಶಾಸಕರು ಮಸ್ಕಿ, ಸಿದ್ದಣ್ಣ ಹೂವಿನಬಾವಿ,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಮಸ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಪಾಟೀಲ್ ಯದ್ದಲದಿನ್ನಿ, ಗ್ರಾಮೀಣ ಘಟಕ ಬ್ಲಾಕ್ ಕಾಂಗ್ರೆಸ್ಸಿನ ಅಧ್ಯಕ್ಷರಾದ ಹನುಮಂತಪ್ಪ ಮುದ್ದಾಪುರ, ಹನುಮಂತಪ್ಪ ವೆಂಕಟಾಪುರ್, ಎಸ್ಸಿ ಘಟಕ ಅಧ್ಯಕ್ಷರಾದ ಮಲ್ಲಯ್ಯ ಮುರಾರಿ, ಮಲ್ಲಯ್ಯ ಬಳ್ಳಾ,ಯುವ ಕಾಂಗ್ರೆಸ್ ಅಧ್ಯಕ್ಷರಾದ ಹನುಮೇಶ ಬಾಗೋಡಿ, ಇಬ್ರಾಹಿಂ ಮೆದಿಕಿನಾಳ ಕಾಂಗ್ರೆಸ್ ಕಾರ್ಯಕರ್ತ, ಎನ್ ಎಸ್ ಯು ಐ ಹಾಗೂ ಕೆಪಿಸಿಸಿ ಸಾಮಾಜಿಕ ಜಾಲತಾಣದ ಅಧ್ಯಕ್ಷರಾದ ವೀರಭದ್ರ ಕೊಠಾರಿ, ಕಾಂಗ್ರೆಸ್ ಮುಖಂಡರು ಹಾಗೂ ಸರ್ವ ಸದಸ್ಯರು ಭಾಗಿಯಾಗಿದ್ದರು.