"ಮುಂಜಾನೆ ಮಾತು" : ಶರಣು ಕೋಟಾರಗಸ್ತಿ ಯಾಳವಾರ

Udayavani News
0
ಸಮಯ ಎಲ್ಲವನ್ನು ಸರಿಪಡಿಸುತ್ತದೆ ಸಮಾಧಾನದಿಂದಿರಿ. 
ನಿಮ್ಮ ಬಗ್ಗೆ ಬೇರೆಯವರು ಏನು ಆಲೋಚಿಸುತ್ತಾರೆ ಎನ್ನುವುದನ್ನು ನಿಮ್ಮ ಕಾಯಕವಾಗದಿರಲಿ. 
ನಿಮ್ಮನ್ನು ಬೇರೊಬ್ಬರಿಗೆ ಹೋಲಿಸಿಕೊಳ್ಳದಿರು, ಏಕೆಂದರೆ ಅವರು ನಡೆದು ಬಂದ ದಾರಿ ಬಗ್ಗೆ ನಿಮಗೆಷ್ಟು ಗೊತ್ತಿರಲು ಸಾಧ್ಯ.? 
ಸಮಸ್ಯೆಗಳ ಬಗ್ಗೆ ಎಂದು ಚಿಂತೆ ಮಾಡಬೇಡಿ. ಏಕೆಂದರೆ ಅದರ ಪರಿಹಾರಕ್ಕಾಗಿ ಯೋಚಿಸಲು ಇರುವ ಸಮಯವನ್ನು ಅದು ತಿಂದು ಹಾಕುತ್ತದೆ. 
ನಿಮ್ಮ ಸಂತೋಷವನ್ನು ನೀವೇ ಹುಡುಕಿಕೊಳ್ಳಬೇಕು, ಬೇರೆಯವರಿಂದ ಎಂದು ಅಪೇಕ್ಷಿಸಬಾರದು. 
ಹಣದಿಂದ ಸಂತೋಷವನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ. ದುಃಖವಾದಾಗ ಬೆಂಜ್ ಕಾರಲ್ಲಿ ಕೂತು ಅಳಬಹುದಷ್ಟೇ. 
ಸಹಾಯದ ಅವಶ್ಯಕತೆ ಇರುವವರಿಗೆ ಸಹಕರಿಸಿ. ಸಮಯ ಬಂದಾಗ ಅವರು ನಿಮಗೆ ಸಹಾಯ ಮಾಡುತ್ತಾರೆ. 
ಸೋಲಿನಿಂದಲೇ ಸಾಧನೆಯು ಆರಂಭವಾಗೋದು. ಸೋಲದಿರುವುದು ಹೇಗೆಂದು ಸೋಲಿನಿಂದಲೇ ಕಲಿಯಬೇಕು. 
ನೀವು ಮಾಡುವ ಕೆಲಸವನ್ನು ಆಟದಂತೆ ಆನಂದಿಸಿ, ಆದರೆ ಕೆಲಸದೊಂದಿಗೆ ಎಂದು ಆಟವಾಡಬೇಡಿ. 
ಮಾತು ಮಾವಿನ ಹಣ್ಣಿನಂತಿರಲಿ, ಮರದಿಂದ ಬೀಳುವ ಮೊದಲೇ ಎಚ್ಚರವಹಿಸಿ. 
ವಿಶ್ವಾಸ ಗಳಿಸುವುದು ಕಷ್ಟ, ಕಳೆದುಕೊಳ್ಳುವುದು ಸುಲಭ. ಯಾರಾದರೂ ನಾವು ಹೇಳುವ ಸುಳ್ಳುಗಳನ್ನು ನಂಬುತ್ತಾರೆ ಎಂದರೆ ಅವರು ದೊಡ್ಡರಲ್ಲ, ಅವರ ವಿಶ್ವಾಸಕ್ಕೆ ನಾವು ಅರ್ಹರಲ್ಲ ಎಂದರ್ಥ! ವಿಶ್ವಾಸಿಗಳಾಗಿರಿ, ವಿಶ್ವಾಸದ್ರೋಹಿಗಳಾಗಬೇಡಿ. 
🚩ಗೀತಾಧ್ಯಯನಶೀಸ್ಯ ಪ್ರಾಣಾಯಾಮಪರಸ್ಯ ಚ! 
ನೈವ ಸಂತಿ ಹಿ ಪಾಪಾನಿ ಪೂರ್ವಜನ್ಮಕೃತಾನಿಚ!! 🚩
ಓಂ ಜಯ ಭಗವದ್ಗೀತೆ
ಓಂ ಕೇಶವಾಯ ನಮಃ
🙏 ಶುಭೋದಯ🙏

Post a Comment

0Comments

Post a Comment (0)