ಸಿಂಘಂ" ಸುನಿಲ್ ತೇಲಿಗೆ ಬೆದರಿದ ರಾಣೇಬೆನ್ನೂರು!?ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾದವರು ದಿಕ್ಕಾಪಾಲು...!

Udayavani News
0

ರಾಣೇಬೆನ್ನೂರು:ಪ್ರಾಮಾಣಿಕ ದಕ್ಷ ಅಧಿಕಾರಿಗಳಿಗೆ ಯಾವ ಸ್ಥಳವಾದರೂ ತಮ್ಮ ಕರ್ತವ್ಯವನ್ನು ಕಾಯಾ,ವಾಚಾ, ಮನಸಾ ನಿರ್ವಹಿಸಬೇಕು ಎಂದು ಮನಸ್ಸು ಮಾಡಿದ್ದರೆ ಅವರು ಎಲ್ಲಿ ಬೇಕಾದರೂ ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಾರೆ .


ತನ್ನಿಂದ ತನ್ನ ಹುದ್ದೆಗೆ ಯಾವುದೇ ರೀತಿಯಲ್ಲೂ ಧಕ್ಕೆ ಬರಬಾರದು, ಹುದ್ದೆಯ ಘನತೆ, ಗೌರವವನ್ನು ಹೆಚ್ಚಿಸಬೇಕು ಎಂಬ ಪ್ರಾಮಾಣಿಕ ಅಧಿಕಾರಿಗಳ ಕೊರತೆ ಇಂದಿನ ದಿನಮಾನಗಳಲ್ಲಿ ನಾವು ಕಾಣಲು ಸಾಧ್ಯವಿಲ್ಲ.

ಇವತ್ತಿನ ಪರಿಸ್ಥಿತಿಯಲ್ಲಿ ದಕ್ಷ, ಪ್ರಾಮಾಣಿಕ ಅಧಿಕಾರಿಗಳಿಗೆ ಉಳಿಗಾಲವಿಲ್ಲ.ಸ್ವಾಸ್ಥ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಅವರೇನಾದರೂ ಕೆಲ ಬದಲಾವಣೆ ಮಾಡಲು ಹೊರಟರೆ ರಾಜಕಾರಣಿಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ.ಒಂದು ವೇಳೆ ರಾಜಕಾರಣಿಗಳ ಮಾತನ್ನು ಕೇಳದಿದ್ದರೆ ಪ್ರಾಮಾಣಿಕ ಅಧಿಕಾರಿಗಳಿಗೆ ವರ್ಗಾವಣೆ ಕಟ್ಟಿಟ್ಟ ಬುತ್ತಿ.

ಹರಿಹರ ಪೊಲೀಸ್ ಇಲಾಖೆಯಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದ ತಾಲ್ಲೂಕಿನ ಜನ ಸಾಮಾನ್ಯರ ಮನೆಮಾತಾದ "ಸಿಂಘಂ" ಖ್ಯಾತಿಯ ಪಿಎಸ್ಐ ಸುನೀಲ್ ಬಸವರಾಜ ತೇಲಿ ಇಂದು ರಾಣೆಬೆನ್ನೂರಿನಲ್ಲಿ ತಮ್ಮ ಕರ್ತವ್ಯದಿಂದ ಘರ್ಜಿಸುತ್ತಿದ್ದಾರೆ.

"ಸಿಂಘಂ" ಸುನಿಲ್ ತೇಲಿ ಅವರ ದಿಟ್ಟ ನಡೆಗೆ ಅಕ್ರಮ ಚಟುವಟಿಕೆಯ ದಂಧೆಕೋರರು ದಿಕ್ಕಾಪಾಲಾಗಿದ್ದಾರೆ.ವಾಮಮಾರ್ಗದಲ್ಲಿ ತೇಲಿ ಅವರ ವರ್ಗಾವಣೆಗೆ ಕುತಂತ್ರ ನಡೆಸುತ್ತಿದ್ದಾರೆ.

ರಾಣೆಬೆನ್ನೂರು ತಾಲ್ಲೂಕಿನಾದ್ಯಂತ ಮಟ್ಕಾ ದಂಧೆಗೆ ಸುನೀಲ್ ಬಸವರಾಜ ತೇಲಿ ಸಂಪೂರ್ಣ ವಿರಾಮ ಹಾಕಿದ್ದಾರೆ. ಹಾವೇರಿ ಜಿಲ್ಲೆಯ ಇತಿಹಾಸದಲ್ಲೇ ಕ್ಲಬ್ ಗಳಿಗೆ ಬಾಗಿಲು ಹಾಕಿದ ಕೀರ್ತಿ "ಸಿಂಘಂ" ಖ್ಯಾತಿಯ ಸುನೀಲ್ ತೇಲಿ ಸಲ್ಲುತ್ತದೆ.ಸರ್ಕಾರದ ಷರತ್ತುಗಳನ್ನು ಉಲ್ಲಂಘಿಸಿ ಕ್ಲಬ್ ಗಳಲ್ಲಿ ನಡೆಸುತ್ತಿರುವ ಅನೈತಿಕ ವ್ಯವಹಾರಗಳಿಗೆ ಸುನೀಲ್ ತೇಲಿ ದಿಟ್ಟ ಹೆಜ್ಜೆಯಿಂದ ಇಂದು ಬಾಗಿಲು ಹಾಕುವಂತಹ ಪರಿಸ್ಥಿತಿ ರಾಣೇಬೆನ್ನೂರಿನಲ್ಲಿ ನಿರ್ಮಾಣವಾಗಿದೆ .ಕಾಳಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಮಾರಾಟ ಮಾಡುತ್ತಿರುವ ವಿಚಾರ ಇವರ ಗಮನಕ್ಕೆ ಬಂದರೆ ಅವರ ಬಾಯಿಗೆ ಅದೇ ಅನ್ನಭಾಗ್ಯದ ಅಕ್ಕಿಯಿಂದ ಎಳ್ಳು ನೀರು ಬಿಡುತ್ತಿದ್ದಾರೆ.ಇಸ್ಪೀಟ್ ಆಡುವವರ ಕೈ ಕಟ್ ಆಗಿದೆ.

ಸುನೀಲ್ ತೇಲಿ ರಾಣೆಬೆನ್ನೂರು ನಗರ ಪೊಲೀಸ್ ಠಾಣೆಯ ಠಾಣಾಧಿಕಾರಿಯಾಗಿ ಕೇವಲ ನಾಲ್ಕೇ ತಿಂಗಳಲ್ಲಿ ಗಮನಾರ್ಹವಾದ ಬದಲಾವಣೆಗಳನ್ನು ಮಾಡಿದ್ದಾರೆ ಹಾಗೂ ಮಾಡುತ್ತಿದ್ದಾರೆ .ಇವರ ಈ ದಿಟ್ಟ ನಡೆಗೆ ಬೆಚ್ಚಿಬಿದ್ದ ಅಕ್ರಮ ದಂಧೆಕೋರರು ತಮ್ಮ ಆಪ್ತ ರಾಜಕಾರಣಿಗಳ ಮೂಲಕ ಒತ್ತಡ ತಂದು ವರ್ಗಾವಣೆ ಮಾಡುವ ಕುತಂತ್ರ ನಡೆಸುತ್ತಿದ್ದಾರೆ.

ರಾಣೆಬೆನ್ನೂರು ತಾಲ್ಲೂಕಿನಲ್ಲಿ ದಕ್ಷ ,ಪ್ರಾಮಾಣಿಕ ಪೋಲಿಸ್ ಅಧಿಕಾರಿಗಳಿಗೆ ಬೆಲೆ ಇಲ್ಲ.ಹೇಗಾದರೂ ಮಾಡಿ ಸುನೀಲ್ ತೇಲಿ ಅವರನ್ನ ತಾಲ್ಲೂಕಿನಿಂದಲೇ ವರ್ಗಾವಣೆ ಮಾಡಿಸಬೇಕು ಎಂಬ ಷಡ್ಯಂತ್ರವನ್ನು ನಡೆಸುತ್ತಿದ್ದಾರೆ ಎಂಬ ಮಾಹಿತಿ ನಮ್ಮ ಮಾಧ್ಯಮಕ್ಕೆ ಈಗಾಗಲೆ ಲಭ್ಯವಾಗಿದೆ .

ಕುಮಾರಪಟ್ಟಣಂ ಪೋಲಿಸ್ ಠಾಣೆಯ ಖಡಕ್ ಠಾಣಾಧಿಕಾರಿ ಸಂಜೀವ್ ಕುಮಾರ್ ಅವರನ್ನು ಈಗಾಗಲೇ ವರ್ಗಾವಣೆ ಮಾಡಲಾಗಿದೆ.ಮುಂದಿನ ಸರದಿ ಸುನೀಲ್ ತೇಲಿ ಅವರ ವರ್ಗಾವಣೆ ಎಂದು ರಾಣೆಬೆನ್ನೂರು ತಾಲ್ಲೂಕಿನ ಅಕ್ರಮ ದಂಧೆಕೋರರು ಮಾತನಾಡಿಕೊಳ್ಳುತ್ತಿದ್ದಾರೆ.

ಹಾಗಾದರೆ ಗೃಹ ಇಲಾಖೆಯಲ್ಲಿ ದಕ್ಷ, ಪ್ರಾಮಾಣಿಕ ಅಧಿಕಾರಿಗಳಿಗೆ ಬೆಲೆ ಇಲ್ಲವೇ ?ಅವರು ಯಾವುದೇ ಒತ್ತಡವಿಲ್ಲದೆ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲವೇ ?ರಾಜಕಾರಣಿಗಳು ಏಕೆ ಗೃಹ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಾರೆ ?ಅವರಿಗೆ ಜನಸಾಮಾನ್ಯರ ನೆಮ್ಮದಿಯ ಬದುಕು ಬೇಡವೇ ?ರಾಣೇಬೆನ್ನೂರಿನ ಜನತೆ ನೆಮ್ಮದಿಯಿಂದ ಬದುಕಬೇಕು ಎಂಬ ಇಚ್ಛೆ ರಾಜಕಾರಣಿಗಳಿಗೆ ಇಲ್ಲವೇ ?ರಾಣೆಬೆನ್ನೂರು ತಾಲ್ಲೂಕಿನಲ್ಲಿ ಪ್ರಾಮಾಣಿಕ ದಕ್ಷ, ಅಧಿಕಾರಿಗಳ ವರ್ಗಾವಣೆಯನ್ನು ತಡೆಯುವಂಥ ನಾಯಕರು ಇಲ್ಲವೇ ? ಸುನೀಲ್ ಬಸವರಾಜ ತೇಲಿ ಅವರು ಮಟ್ಕಾ ದಂಧೆ ತಡೆದಿದ್ದು ತಪ್ಪೇ?ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಕ್ಲಬ್ ಗಳನ್ನು ನಡೆಸುತ್ತಿದ್ದು ಅವುಗಳನ್ನು ಗುರುತಿಸಿ ಬಾಗಿಲು ಹಾಕಿಸಿದ್ದು ತಪ್ಪೇ?ಅನ್ನಭಾಗ್ಯ ಅಕ್ಕಿ ಸಾಗಾಣಿಕೆಗೆ ಕಡಿವಾಣ ಹಾಕಿದ್ದು ತಪ್ಪೆ ?ಇಸ್ಪೀಟ್ ಆಟ ದಿಂದ ಮನೆಯ ನೆಮ್ಮದಿಯನ್ನ ಕಳೆದುಕೊಳ್ಳುತ್ತಿದ್ದ ಯುವಕರ ಬೆಂಡೆತ್ತಿದ್ದು ತಪ್ಪೆ ?ಗಾಂಜಾ ಮಾರಾಟಗಾರರನ್ನು ಗುರುತಿಸಿ ಕಾನೂನು ವ್ಯಾಪ್ತಿಯಲ್ಲಿ ಶಿಕ್ಷೆ ಕೊಡಿಸಲು ಪ್ರಯತ್ನಿಸಿದ್ದು ತಪ್ಪೆ ?ಪೊಲೀಸ್ ಇಲಾಖೆಯ ಗೌರವವನ್ನು ಹೆಚ್ಚಿಸಬೇಕು,ಜನಸಾಮಾನ್ಯರಲ್ಲಿ ಹೊಸ ಭರವಸೆಯನ್ನ ಹುಟ್ಟಿಸಬೇಕು ಎಂದು ದಿಟ್ಟ ಹೆಜ್ಜೆ ಇಟ್ಟಿದ್ದು ತಪ್ಪೆ?ಜನಸ್ನೇಹಿ ಪೊಲೀಸ್ ಠಾಣೆಯನ್ನಾಗಿ ಮಾಡಬೇಕು ಎಂಬ ಸಂಕಲ್ಪದೊಂದಿಗೆ ಅಧಿಕಾರದ ಕುರ್ಚಿಯಲ್ಲಿ ಕುಳಿತು ಯಾವುದೇ ಒತ್ತಡಕ್ಕೆ ಮಣಿಯದೆ ತಮ್ಮ ಕರ್ತವ್ಯವೇ ದೇವರೆಂದು ನಂಬಿ ಸಾಗುತ್ತಿರುವ ಅಧಿಕಾರಿಗಳ ವರ್ಗಾವಣೆ ಏಕೆ ?

ರಾಣೇಬೆನ್ನೂರು ತಾಲ್ಲೂಕಿನ ಪ್ರಜ್ಞಾವಂತ ನಾಗರಿಕರೇ ಇದೀಗ ಧ್ವನಿ ಎತ್ತುವಂತಹ ಸಮಯ ಬಂದಿದೆ .ನಿಮ್ಮ ಧ್ವನಿ ವಿಧಾನಸೌಧದ ಬಾಗಿಲು ಬಡಿಯುವಂತಿರಬೇಕು.ತಾಲ್ಲೂಕಿನ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪ್ರಾಮಾಣಿಕ ಅಧಿಕಾರಿಗಳನ್ನ ಉಳಿಸಿಕೊಳ್ಳುವತ್ತ ಹೋರಾಟ ಮಾಡಬೇಕು .ಆ ನಿಟ್ಟಿನಲ್ಲಿ ಕೂಡಲೇ ಕಾರ್ಯಪ್ರವೃತ್ತರಾಗಿ .

ಸುನಿಲ್ ತೇಲಿ ಹರಿಹರ ತಾಲ್ಲೂಕಿನಲ್ಲಿ ಠಾಣಾಧಿಕಾರಿಯಾಗಿ ಅಕ್ರಮ ಚಟುವಟಿಕೆಗಳಿಗೆ ಸಂಪೂರ್ಣ ಬ್ರೇಕ್ ಹಾಕಿದ್ದರು ಅವರ ಕಾರ್ಯದಕ್ಷತೆಯನ್ನು ಕಂಡಂತಹ ನಾಗರಿಕರು ಅವರನ್ನ "ಸಿಂಘಂ"ಎಂದು ಹೊಗಳತೊಡಗಿದರು.ಅಂತಹ ಪ್ರಾಮಾಣಿಕ, ದಕ್ಷ ಅಧಿಕಾರಿ ಇದೀಗ ರಾಣೆಬೆನ್ನೂರು ತಾಲ್ಲೂಕಿನಲ್ಲಿ ಘರ್ಜಿಸುತ್ತಿದ್ದಾರೆ ಅವರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ತಾಲ್ಲೂಕಿನ ಜನ ಹೋರಾಡಬೇಕಾಗಿದೆ.

ಗೃಹಸಚಿವ ಆರಗ ಜ್ಞಾನೇಂದ್ರರವರು ಪೊಲೀಸ್ ಇಲಾಖೆಯಲ್ಲಿ ಸುಧಾರಣೆ ತರುತ್ತೇವೆ ಎಂದು ಪ್ರತಿ ಮಾಧ್ಯಮಗೋಷ್ಠಿಯಲ್ಲಿ ಹೇಳುತ್ತಲೇ ಬಂದಿದ್ದೀರಾ .ಆದರೆ ನಿಮ್ಮ ಇಲಾಖೆಯಲ್ಲಿ ಪ್ರಾಮಾಣಿಕ ಅಧಿಕಾರಿಗಳ ವರ್ಗಾವಣೆ ನಡೆಯುತ್ತಲೇ ಇದೆ .ಸಂಜೀವ್ ಕುಮಾರ್ ಅವರ ವರ್ಗಾವಣೆಯ ನಂತರ ಸುನೀಲ್ ತೇಲಿ ಅವರ ವರ್ಗಾವಣೆಗೆ ಕುತಂತ್ರ ನಡೆಯುತ್ತಿದೆ ಇದು ನಿಮ್ಮ ಗಮನಕ್ಕೆ ಬಂದಿಲ್ಲವೇ? ಹಾಗಾದರೆ ನಮ್ಮ ಮಾಧ್ಯಮ ನಿಮ್ಮ ಗಮನಕ್ಕೆ ತರುವ ಪ್ರಯತ್ನ ಮಾಡುತ್ತಿದೆ .ಇನ್ನು ಮುಂದಾದರೂ ದಕ್ಷ, ಪ್ರಾಮಾಣಿಕ ಅಧಿಕಾರಿಗಳು ಪೊಲೀಸ್ ಇಲಾಖೆಯಲ್ಲಿ ಯಾವುದೇ ಒತ್ತಡವಿಲ್ಲದೆ ಕಾರ್ಯನಿರ್ವಹಿಸಿಕೊಂಡು ಹೋಗುವಂತಹ ವಾತಾವರಣವನ್ನು ನಿರ್ಮಾಣ ಮಾಡಿ .

ಪಿಎಸ್ಸೈ ಸುನೀಲ್ ಬಸವರಾಜ ತೇಲಿ ಅವರ ನೆಡೆಯಿಂದ ರಾಣೇಬೆನ್ನೂರು ತಾಲ್ಲೂಕಿನ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾದವರ ಕನಸಿನಲ್ಲಿ ಸಿಂಹಸ್ವಪ್ನವಾಗಿ ಕಾಡುತ್ತಿರುವುದಂತೂ ಸತ್ಯ.
ಪಿಎಸ್ಸೈ ಸುನೀಲ್ ತೇಲಿ ಎಲ್ಲೇ ಇದ್ದರೂ ತಮ್ಮ ಘರ್ಜನೆ ನಿಲ್ಲಿಸುವುದಿಲ್ಲ ಎಂಬುದಕ್ಕೆ ರಾಣೇಬೆನ್ನೂರು ತಾಲ್ಲೂಕಿನಲ್ಲಿ ಅವರ ಕರ್ತವ್ಯ ನಿಷ್ಠೆ  ತಾಜಾ ಉದಾಹರಣೆ

Post a Comment

0Comments

Post a Comment (0)