ದೇವರ ಹಿಪ್ಪರಗಿ :- ಭಾರತದ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಪ್ರಭುಗಳಾಗಿರುತ್ತಾರೆ.ಭಾರತವು ಸಂವಿಧಾನದ ಅಡಿಯಲ್ಲಿ ನಡೆಯುತ್ತಿರುವಾಗ ರಾಷ್ಟ್ರವಾಗಿದೆ ಹಾಗಾಗಿ ಇಲ್ಲಿ ಪ್ರಜೆಗಳೇ ಪ್ರಭುಗಳು.
ಭಾರತವು ಸಾವಿರಾರು ಹಳ್ಳಿ ಗಳಿಂದ ಕೂಡಿದ ದೇಶವಾಗಿದೆ, ಗ್ರಾಮಗಳ ಅಭಿವೃದ್ಧಿಯ ಮೇಲೆ ದೇಶದ ಅಭಿವೃದ್ಧಿ ನಿಂತಿದೆ.
ಪ್ರಜಾಪ್ರಭುತ್ವದ ದೇಶದಲ್ಲಿ ಸರ್ವಾಧಿಕಾರಿ ಆಡಳಿತ ನಡೆಸಲು ಯಾವನಿಂದಲೂ ಸಾಧ್ಯವಿಲ್ಲ ಎಂಬುವುದಕ್ಕೆ ಇವತ್ತಿನ ಘಟನೆಯು ಸಾಕ್ಷಿಯಾಗಿದೆ.
ದೇವರಹಿಪ್ಪರಗಿ ತಾಲೂಕಿನಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದ ಅತಿದೊಡ್ಡ ಗ್ರಾ.ಪಂ ಮಣೂರದಲ್ಲಿ ಸುಮಾರು 30 ಸದಸ್ಯರನ್ನು ಹೊಂದಿದೆ.ಅತಿ ಹೆಚ್ಚು ಸದಸ್ಯರ ಬೆಂಬಲದಿಂದ ಸುಮಾರು 15 ತಿಂಗಳ ಕಾಲ ಗ್ರಾ.ಪಂ ಅದ್ಯಕ್ಷರಾಗಿ ರಾಚಪ್ಪ ಶರಣಪ್ಪ ಕಮತಗಿ ಅವರು ಅಧಿಕಾರವನ್ನು ನಡೆಸಿದ್ದಾರೆ.
ಆದರೆ ಇಂದು ಸುಮಾರು 27 ಗ್ರಾ.ಪಂ ಸದಸ್ಯರು ಇಂಡಿ ಉಪವಿಭಾಗದ ಎ.ಸಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅದ್ಯಕ್ಷರಾದ ರಾಚಪ್ಪ ಕಮತಗಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ವನ್ನು ಎಲ್ಲ ಸದಸ್ಯರು ಕೈ ಎತ್ತುವ ಮುಖಾಂತರ ಅಂಗೀಕರಿಸಲಾಯಿತು.
ಎಲ್ಲ ಸದಸ್ಯರು ಪತ್ರಿಕಾ ಮಾಧ್ಯಮದವರ ಜೋತೆ ಮಾತನಾಡಿ ರಾಚಪ್ಪ ಕಮತಗಿ ಅವರು ಅಧಿಕಾರ ವಹಿಸಿಕೊಂಡ ದಿನದಿಂದ ಯಾವುದೇ ಸಭೆಗಳು ನಡೆಸಲಿಲ್ಲ, ಗ್ರಾ.ಪಂ ಸದಸ್ಯರ ಮಾತಿಗೆ ಯಾವುದೇ ಕಿಮ್ಮತ್ತು ಕೊಡ್ತಾ ಇರಲಿಲ್ಲ,ಗ್ರಾ.ಪಂ ಸಂಬಂಧ ಪಟ್ಟ ಕ್ರಿಯಾ ಯೋಜನೆಗಳು,ಕಾಮಗಾರಿಯ ಕುರಿತು ಸದಸ್ಯರನ್ನು ಕೇಳುತ್ತಿರಲಿಲ್ಲ, ಒಟ್ಟಾರೆಯಾಗಿ ಸರ್ವಾಧಿಕಾರಿ ಆಡಳಿತವನ್ನು ನಡೆಸುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ.
ಈ ಒಂದು ಸಭೆಯಲ್ಲಿ ಎ.ಓ ಮಹೇಶಕುಮಾರ ಮಾಲಗತ್ತಿ, ಎ.ಡಿ ಶಾಂತಗೌಡ ನ್ಯಾಮಣ್ಣವರ,ಪಿಡಿಓ ರಾಜಶ್ರೀ ದೇವೂರ,ಆರ್.ಡಿ.ಮಣೂರ ಕ್ಲರ್ಕ್,ಆರ್.ಎಮ್.ಮಾದರ ಸೆಕ್ರೆಟರಿ,ಎ.ಆರ್ ಮುಜಾವರ, ಸಂಗನಗೌಡ ಬಿರಾದಾರ, ಮಲಕಪ್ಪ ಬಾಗೇವಾಡಿ,ವಸಂತ ರಾಠೋಡ,ಅಂಬಣ್ಣ ಆನೆಗುಂದಿ,ಆನಂದ ಬಜೆಂತ್ರಿ,ವಿಜಯಕುಮಾರ ನಾಯ್ಕ,ಕಲ್ಮೇಶ ಬಗಲಿ ಹಾಗೂ ಸರ್ವ ಸದಸ್ಯರು ಭಾಗವಹಿಸಿದ್ದರು.
ವರದಿ..ಬಸವರಾಜ ಯಲಗೋಡ ದೇವರ ಹಿಪ್ಪರಗಿ