ಬಾಬಾ ಸಾಹೇಬ್ ಅಂಬೇಡ್ಕರ್ ರವರು ವಿಶ್ವ ಕಂಡ ಅತ್ಯುತ್ತಮ ಸಂವಿಧಾನ ತಜ್ಞ : ನಾಗಭೂಷಣ ಬಾರಕೇರ




ಉಪ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ
UDAYAVANI NEWS 
ಮಸ್ಕಿ, ಏಪ್ರಿಲ್ 15 : ಶ್ರೀ ರಾಮ್ ಟ್ಯಾಕ್ಸಿ ಚಾಲಕರು ಮಾಲಿಕರ ಸಂಘದಿಂದ ವತಿಯಿಂದ
ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು.

ಈ ವೇಳೆ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ನಾಗಭೂಷಣ ಬಾರಕೇರೆ ಬಾಬಾ ಸಾಹೇಬ್ ಅಂಬೇಡ್ಕರ್ ರವರು ವಿಶ್ವ ಕಂಡ ಅತ್ಯುತ್ತಮ ಸಂವಿಧಾನ ತಜ್ಞ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು .

ಅದೇ ರೀತಿ ,ಅಧ್ಯಕ್ಷ ಶಿವಕುಮಾರ ಮಾತನಾಡಿ  
ಡಾ. ಬಿ ಆರ್ ಅಂಬೇಡ್ಕರ್ ರವರು
ಅಸಂಖ್ಯಾತ ಭಾರತೀಯರ ತ್ಯಾಗ ಹೋರಾಟ ಬಲಿದಾನದ ಫಲವಾಗಿ ನಮಗೆ ಸ್ವಾತಂತ್ರ್ಯ ಸಿಕ್ಕಿತು. ಆದರೆ ಭಾರತಕ್ಕಾಗಿ ತನ್ನದೇ ಆದ ಸಂವಿಧಾನವನ್ನು ರೂಪಿಸಿ ಸ್ವತಂತ್ರ ಭಾರತದ ಸಮಗ್ರ ಅಭಿವೃದ್ಧಿಗೆ ಹೊಸ ಭಾಷ್ಯ ಬರೆದವರು ಡಾ. ಬಿ.ಆರ್. ಅಂಬೇಡ್ಕರ್ ರವರು ಎಂದರು.

ಅದೇ ರೀತಿ ಕಾರ್ಯದರ್ಶಿ ಶರಣು ನಾಯಕ ಮಾತನಾಡಿ 
ಅಂಬೇಡ್ಕರ್ ಅವರ ದೂರದೃಷ್ಟಿಯ ಫಲವಾಗಿ ಇಂದು ಭಾರತ ಅಭಿವೃದ್ಧಿಶೀಲ ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಅಲ್ಲದೆ ಭಾರತದ ಸಂವಿಧಾನಕ್ಕೆ ವಿಶ್ವ ಮಟ್ಟದಲ್ಲಿ ಅತ್ಯುನ್ನತ ಗೌರವ ಸಿಕ್ಕಿದೆ. ಅಸ್ಪೃಶ್ಯತೆ ಮತ್ತು ವರ್ಣ ತಾರತಮ್ಯದ ವಿರುದ್ಧ ಧ್ವನಿ ಎತ್ತುವ ಮೂಲಕ ದಲಿತರ, ಕೆಳವರ್ಗದವರ ಹಾಗೂ ಶೋಷಿತರ ದನಿಯಾದವರು ಅದಕ್ಕಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ರವರನ್ನು
 "ಭಾರತ ಸಂವಿಧಾನದ ಪಿತಾಮಹ" ಎನ್ನುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗಂಗಾಮಸ್ಥ ಸಮಾಜದ ಮುಖಂಡರಾದ ನಾಗಭೂಷಣ ಬಾರಕೇರ,ಹಾಗೂ
ಶ್ರೀ ರಾಮ್ ಟ್ಯಾಕ್ಸಿ ಚಾಲಕರು ಮಾಲಿಕರ ಸಂಘದ ನೂತನ ಅಧ್ಯಕ್ಷ 
ಶಿವುರಾಜ, ಉಪಾಧ್ಯಕ್ಷ ನಾಗರಾಜ ,ಪ್ರಧಾನ ಕಾರ್ಯದರ್ಶಿ ಶರಣು ನಾಯಕ ,
ಸದಸ್ಯರಾದ ಹುಲಗಪ್ಪ, ರಮೇಶ, ಭಗೀರಥ, ಹನುಮೇಶ ಸೇರಿದಂತೆ ಆನೇಕ ಚಾಲಕರು 
 ಭಾಗವಹಿಸಿದ್ದರು.

Post a Comment

Previous Post Next Post