ಲಿಂಗಸುಗೂರ ಬಿಜೆಪಿ ಟಿಕೆಟ್ ಮಾನಪ್ಪ ವಜ್ಜಲ




ಉಪ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಲಿಂಗಸುಗೂರ, ಏಪ್ರಿಲ್ 12 : ವಿಧಾನಸಭಾ ಚುನಾವಣೆಗೆ 189 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟ ಬಿಜೆಪಿ ಹೈಕಮಾಂಡ್ ಇಂದು (ಮಂಗಳವಾರ) ಪ್ರಕಟಿಸಿದೆ.
ಹಲವು ಸುತ್ತುಗಳ ಸಭೆ, ಸುದೀರ್ಘ ಸಮಾಲೋಚನೆಗಳ ಬಳಿಕ ಮಂಗಳವಾರ ರಾತ್ರಿ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಹೈಕಮಾಂಡ್ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.
ಲಿಂಗಸಗೂರು:ಲಿಂಗಸಗೂರು ಕ್ಷೇತ್ರದ ಬಿಜೆಪಿ ಟಿಕೇಟ್ ಗೆ ಏನೆಲ್ಲ ಬೇರೆ ಬೇರೆ ಹೆಸರು ಕೇಳಿಬಂದರು ಅವೆಲ್ಲವನ್ನು ತಳ್ಳಿಹಾಕಿದ ಹೈಕಮಾಂಡ ಕೊನೆಗೆ ಮಾನಪ್ಪ ವಜ್ಜಲರ ಹೆಸರು ಅಂತಿಮಗೊಳಿಸಿ ಟಿಕೇಟ್ ನೀಡಿದೆ ಟಿಕೇಟ್ ಖಚಿತ ವಾಗುತ್ತಲೆ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿಹಂಚಿ ಸಂಭ್ರಮಿಸಿದರು.

ಈ ಸಲ ಮಾನಪ್ಪ ವಜ್ಜಲರಿಗೆ ಬಿಜೆಪಿ ಟಿಕೇಟ್ ಸಿಗುವುದು ಡೌಟ್ ಎನ್ನುವ ಸುದ್ದಿ ಕ್ಷೇತ್ರದಲ್ಲಿ ಹಬ್ಬಿತ್ತು ಆದರೆ ವಜ್ಜಲರು ಅದೆಲ್ಲವನ್ನು ಸಮಾಧಾನದಿಂದಲೆ ಸ್ವೀಕರಿಸಿ ಪಕ್ಷ ಸಂಘಟನೆ ಯಲ್ಲಿ ತೊಡಗಿದ್ದರು.

ಈ ನಡುವೆ ಕ್ಷೇತ್ರದಲ್ಲಿ ನಮಗೆ ಟಿಕೇಟ್ ಸಿಗುತ್ತದೆ ಎಂದು ಕೆಲವರು ಪ್ರಚಾರವನ್ನು ಮಾಡಿಕೊಂಡರು ಆದರೆ ಹೈಕಮಾಂಡ ಇದೆಲ್ಲವನ್ನು ತಳ್ಳಿಹಾಕಿ ಮಾನಪ್ಪ ವಜ್ಜಲರಿಗೆ ಪುನಃ ಕಣಕ್ಕೆ ಇಳಿಸಲು ಅಣಿಯಾಗಿ ಟಿಕೆಟ್ ಘೋಷಣೆ ಮಾಡಿದೆ.

ವಿಷಯ ತಿಳಿಯುತ್ತಿರುವಂತೆ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.

Post a Comment

Previous Post Next Post