ಸುಮಾರು 40 ವರ್ಷದಿಂದ ಹೆರಿಗೆ (ಸೂಲಗಿತ್ತಿ) ನಡೆಸಿಕೊಂಡು ಬರುತ್ತಿರುವ ಚನ್ನಬಸಮ್ಮ




ಉಪ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಯಾದಗಿರಿ, ಏಪ್ರಿಲ್ 12 : ಜಿಲ್ಲೆ ಸುರಪುರ ತಾಲೂಕಿನ ಮಲ್ಲಾ.ಬಿ ಗ್ರಾಮದ ನಿವಾಸಿಯಾದ ಚನ್ನಬಸಮ್ಮ ಗಂಡ ಮಲ್ಲಪ್ಪ ತಳವಾರ್ ವೃತ್ತಿಯಲ್ಲಿ ಸೂಲಗಿತ್ತಿ ಯಾಗಿದ್ದು, ಸುಮಾರು 40 ವರ್ಷದಿಂದ ಮಲ್ಲಾ.ಬಿ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಹೆರಿಗೆ (ಸೂಲಗಿತ್ತಿ) ಮಾಡಿಸುವ ವೃತ್ತಿ ಇವರದಾಗಿದ್ದು. ಚನಬಸಮ್ಮ ಅವರಿಗೂ ಕೂಡ ನಾಲ್ಕು ಜನ ಮಕ್ಕಳು ಇದ್ದು ಕಿತ್ತು ತಿನ್ನುವ ಬಡತನ ಹಾಗೂ ಅವರ ಪತಿಯು ಕೂಡ ಬೇರೆಯವರ ಹೊಲದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು, ಅಂದಿನ ಮಲ್ಲಾ.ಬಿ ಕಿರಿಯ ಆರೋಗ್ಯ ಸಹಾಯಕಿ ಹುದ್ದೆಗೆ ಶ್ರೀಮತಿ ಕುಸುಮ ಎಂಬುವವರು ಚಿಕ್ಕೋಡಿ ಜಿಲ್ಲೆಯವರಾಗಿ ಕರ್ತವ್ಯ ನಿರ್ವಹಿಸಲು ಬಂದಿದ್ದರು. ಅವರು ತುಂಬಾ ಚಿಕ್ಕ ವಯಸ್ಸಿನವರಾಗಿದ್ದು, ಅನುಭವವಿಲ್ಲದ ಕಾರಣ ಊರಿನ ಹಿರಿಯರು ಹಾಗೂ ಅವರ ಪತಿ ಎಲ್ಲರೂ ಸೇರಿಕೊಂಡು ಹಿರಿಯ ಆರೋಗ್ಯ ಸಹಾಯಕಿ ಅವರ ಕೈಯಲ್ಲಿ ಸಹಾಯಕಿಯಾಗಿ ಕೆಲಸ ಮಾಡಲು ಒಪ್ಪಿಸಿದರು. ಸ್ವಲ್ಪ ದಿನದ ನಂತರ ಚನ್ನಬಸಮ್ಮ ಅವರ ಪತಿಯು ಕೂಡ ತೀರಿಕೊಂಡರು. ಚನ್ನಬಸಮ್ಮ ಅವರಿಗೆ ಸಂಸಾರ ನಡೆಸುವುದು ತುಂಬಾ ಕಷ್ಟಕರವಾಯಿತು. ಹಾಗೂ ಮಕ್ಕಳ ವಿದ್ಯಾಭ್ಯಾಸ ಮಾಡಿಸುವುದು ಕಷ್ಟಕರವಾಯಿತು ಆದ್ದರಿಂದ ಹಿರಿಯ ಮಗಳಿಗೆ ಶಿಕ್ಷಣ ಕೊಡಿಸುವುದು ಸಾಧ್ಯವಾಗಲಿಲ್ಲ ಆದರೂ ಎಲ್ಲಾ ಪರಿಸ್ಥಿತಿಯನ್ನು ಎದುರಿಸಿ ಹೆರಿಗೆ ಕಾರ್ಯ ಮಾಡಿಸುತ್ತಾ ತನ್ನ ನಾಲ್ಕು ಜನ ಮಕ್ಕಳ ಲಾಲನೆ ಹಾಗೂ ಪೋಷಣೆಗಾಗಿ ಅವರ ವಿದ್ಯಾಭ್ಯಾಸಕ್ಕಾಗಿ ಯೋಗಕ್ಷೇಮ ನೋಡಿಕೊಳ್ಳುತ್ತಾ ಹೆರಿಗೆ ಮಾಡಿಸುವ ವೃತ್ತಿಯಲ್ಲಿ ಮುಂದುವರೆದರು. ಚನ್ನಬಸಮ್ಮ ಕೂಡ ಅನಕ್ಷರಸ್ಥವಾಗಿದ್ದು. ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿ ತಾಲೂಕು ರವರಿಂದ ತಿಳಿದುಕೊಂಡು ನಂತರ ತಾಲೂಕಿನಲ್ಲಿ ನಡೆಯುವ ಸೋಲಗಿತ್ತಿಯರ ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದರು ಮತ್ತು ಅವರು ಹೇಳಿಕೊಟ್ಟ ಹಾಗೆ ಅವರು ಕಲಿತುಕೊಂಡು ಈಗ ಸುಮಾರು ಪ್ರಸ್ತುತ 6,000 ಕ್ಕಿಂತ ಅಧಿಕ ಹೆರಿಗೆ ಮಾಡಿಸಿದ್ದಾರೆ. ಈಗ ಅವರಿಗೆ 70 ವರ್ಷ ವಯಸ್ಸಾಗಿದ್ದು ಅವರಿಗೆ ಸರಿಯಾಗಿ ಕಣ್ಣು ಕಾಣುವುದಿಲ್ಲ ಹಾಗೂ ತಾಯಿ ಮಗುವಿಗೆ ಒಂದೊಂದು ರೀತಿಯ ಕಾಯಿಲೆಗಳು ಬರುತ್ತವೆ ಆದ್ದರಿಂದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಹೇಳುತ್ತಿದ್ದೇನೆ. ಎಲೆಮರಿ ಕಾಯಿಯಂತೆ ತಳವಾರ ಸಮಾಜದ ಚನ್ನಬಸಮ್ಮ ಅವರು ಹಲವು ಗ್ರಾಮಗಳ ಕುಟುಂಬದವರಿಗೆ ದಾರಿ ದೀಪವಾಗಿ ಚನ್ನಬಸಮ್ಮನವರು ಗುರುತಿಸಿಕೊಂಡಿದ್ದಾರೆ ಆದಕಾರಣ ಇಂತಹ ಒಳ್ಳೆಯ ಕೆಲಸವನ್ನು ಮಾಡಿದ ಚನ್ನಬಸವನವರಿಗೆ ಸರ್ಕಾರವು ಗುರುತಿಸಿ ಪ್ರೋತ್ಸಾಹಿಸಬೇಕೆಂದು ಮಲ್ಲಾಬಿ ಗ್ರಾಮದ ಯುವಕರು ಕೋರಿದ್ದಾರೆ. ಈ ಒಂದು ಸಂದರ್ಭದಲ್ಲಿ ಗ್ರಾಮದ ಹಿರಿಯರು ಹಾಗೂ ಯುವಕರು ಮತ್ತು ಮಹಿಳೆಯರು ಭಾಗಿಯಾಗಿದ್ದರು.

Post a Comment

Previous Post Next Post