ಶ್ರೀ ಸಿದ್ದಗಂಗಾ ಮಠದಲ್ಲಿ 116 ಮಕ್ಕಳಿಗೆ ಉಚಿತ ನಾಮಕರಣ




ಉಪ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ
UDAYAVANI NEWS 
ಬೆಂಗಳೂರು, ಏಪ್ರಿಲ್ 05 : ಡಾ.ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾ ಸ್ವಾಮೀಜಿ ಯವರ 116 ನೇ ಹುಟ್ಟು ಹಬ್ಬದ ಪುಣ್ಯ ಸ್ಮರಣೆ ಪ್ರಯುಕ್ತ ಶ್ರೀ ಸಿದ್ದಗಂಗಾ ಮಠದಲ್ಲಿ 116 ಮಕ್ಕಳಿಗೆ ಉಚಿತ ನಾಮಕರಣ ಕಾರ್ಯಕ್ರಮ ನಡೆಯಿತು.

ಶ್ರೀ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ, ಜಂಗಮ ಮಠ ಚಕ್ರಭಾವಿ ಶ್ರೀ ಸಿದ್ದಲಿಂಗ ಸ್ವಾಮಿಗಳು ಕಾರ್ಯಮದಲ್ಲಿದ್ದ ಮಕ್ಕಳ ತಂದೆ ತಾಯಿಯರಿಗೆ ಶ್ರೀಗಳ ಸ್ಮರಣೆಯ ಭಾಗ್ಯಶಾಲಿಗಳು ಎಂದರು ಮತ್ತು ಶ್ರೀ ಗಳ ಕಾಲಾವಧಿ ಸ್ಮರಿಸಿ ನಾಮಕರಣಾರ್ತಿಗಳಿಗೆ ಆಶೀವರ್ಚನ ಮಾಡಿದರು.
ಡಾ.ಶ್ರೀ ಶಿವಕುಮಾರ ಮಹಾ ಸ್ವಾಮೀಜಿ ಅನ್ನದಾನ ಟ್ರಸ್ಟ್ (ರಿ) ಬೆಂಗಳೂರು ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 120 ಕ್ಕೂ ಹೆಚ್ಚುಭಾರಿ ರಕ್ತದಾನ ಮಾಡಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಅವಾರ್ಡಿ ಆದ ಶ್ರೀಮತಿ. ಮಧುರಾ ಆಶೋಕ್ ರವರು ಈ ದಿನ ಸಂತರ ದಿನ ನಾಮಕರಣಗೊಂಡ ಮಕ್ಕಲ್ಲಿ ಶ್ರೀಗಳ ಭಾವವನ್ನು ಸ್ಮರಿಸಿದರು.

ಈ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಮುಖ್ಯ ಅತಿಥಿ ಯಾಗಿದ್ದ ಸಹಕಾರ ಇಲಾಖೆಯ ಜಾಯಿಂಟ್ ರಿಜಿಸ್ಟ್ರಾರ್ ಮತ್ತು ಸೆಕ್ರೆಟರಿ. ಲಕ್ಷ್ಮೀಪತಯ್ಯ ರವರು ಶ್ರೀ ಸಿದ್ದಗಂಗಾ ಮಠ ಭೂ ಮಂಡಲದ ತಪೋಭೂಮಿ. ಸದ್ದಿಲ್ಲದೇ ಸಾಧನೆ ಗೈದ ಸಂತರ ಸಂತ ಶ್ರೀ ಗಳ ಆಶೀರ್ವಾದ ನಾಮಕರಣಾರ್ಥಿಗಳಿಗೂ ಹಾಗೂ ಎಲ್ಲರಿಗು ಲಭಿಸಲಿ ಎಂದು ಶ್ರೀಗಳ ಸ್ಮರಣೆ ಮಾಡಿದರು. 

 ವಕ್ಫ್ ಬೋರ್ಡ್ ನ ಬೆಂಗಳೂರು ಗ್ರಾಮಾಂತರ ವಕ್ಫ್ ಬೋರ್ಡ್ ಉಪಾಧ್ಯಕ್ಷ ಅಕ್ರಮ್ ಪಾಶ ಮತ್ತು ಕರುನಾಡ ರೈತ ಸಂಘದ ಅಧ್ಯಕ್ಷರಾದ ಮಹಬೂಬ್ ಪಾಶ ಮತ್ತು ಕರ್ನಾಟಕ ಫಿಲಂ ಚೆಮ್ಬ್ ರ್ ಮಾಜಿ ಅಧ್ಯಕ್ಷ ಜೈರಾಜ್, ಮಹಾದೇವಯ್ಯ ಹಾಗೂ ರೈಲು ಅಚ್ಚು ಗಾಲಿ ಕಾರ್ಖಾನೆಯ ಕಾರ್ಮಿಕರ ಗೃಹ ಕೋ ಆಪರೇಟಿವ್ ಅಧ್ಯಕ್ಷರಾದ ರಮೇಶ ಮತ್ತು ಇತರ ಮಠಗಳ ಹರ-ಚರ ಗುರು ಸ್ವಾಮೀಜಿಗಳು, ಆಯೋಜಿಸಿದ್ದ ಟ್ರಸ್ಟ್ ನ ಕಾರ್ಯಾಧ್ಯಕ್ಷ ಜಯಣ್ಣ ಉಪಸ್ಥಿತರಿದ್ದರು.

Post a Comment

Previous Post Next Post