ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರದಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆ;ದೇಶದ ಏಕತೆಯಲ್ಲಿ ಸಮಾನತೆ ಮತ್ತು ಭಾತೃತ್ವ ಭಾವನೆ ಬೆಳೆಸಲು ಸಂವಿಧಾನದ ಅರಿವು ಅವಶ್ಯಕ

ಸಂಪಾದಕರು:ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಹುಣಸಗಿ, ನವೆಂಬರ್ 26 : ಭಾರತದ ಜನತೆಯಾದ ನಾವು ಭಾರತವನ್ನು ಸಾರ್ವಭೌಮ, ಸಮಾಜವಾದಿ, ಧರ್ಮನಿರಪೇಕ್ಷ ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸುವುದಕ್ಕಾಗಿ ಭಾರತದ ಎಲ್ಲಾ ಸಾಮಾಜಿಕ ಆರ್ಥಿಕ ಮತ್ತು ನ್ಯಾಯವನ್ನು ವಿಚಾರ, ನಂಬಿಕೆ, ಧರ್ಮ, ಮತ್ತು ಉಪಾಸನೆಯ ಸ್ವಾತಂತ್ರ್ಯವನ್ನು ಸ್ಥಾನ ಮಾನ ಅವಕಾಶಗಳ ಸಮಾನತೆ ದೊರೆಯುವಂತೆ ಮಾಡುವುದಕ್ಕಾಗಿ , ದೇಶದ ಏಕತೆ ಮತ್ತು ಸಮಗ್ರತೆ ಹಾಗೂ ಭಾತೃತ್ವ ಭಾವ ಮೂಡಿಸಲು ನಮ್ಮ ಸಂವಿಧಾನ ಸಭೆಯಲ್ಲಿ ನಮಗೆ ನಾವೇ ಅರ್ಪಿಸಿಕೊಂಡು ಅಂಗೀಕರಿಸಿ ಶಾಸನ ವಿಧಿಸಿಕೊಂಡಿದ್ದೇವೆ ಎಂದು ಪಟ್ಟಣದ ಸ್ವಾಮಿ ವಿವೇಕಾನಂದ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರದಲ್ಲಿ ಪ್ರಾಚಾರ್ಯ ಸುರೇಶ ಕೀರಣಗಿ ಪ್ರತಿಜ್ಞಾ ವಿಧಿ ಭೋದಿಸಿದರು. 

 ಈ ಸಂದರ್ಭದಲ್ಲಿ ಪಿಡಿಒ ಮಲ್ಲನಗೌಡ ಪಾಟೀಲ, ಬಸವರಾಜ ಮರೋಳ, ಹಣಮಂತ್ರಾಯ, ಬಸವರಾಜ ಜಾಧವ, ಶರಣಪ್ಪ ಕಟ್ಟಿಮನಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

Post a Comment

Previous Post Next Post