ಭಾರತ ಪ್ರಜಾಪ್ರಭುತ್ವದ ತಾಯಿ:ಮೂಲಭೂತ ಕರ್ತವ್ಯ ಪಾಲನೆ ಸಂವಿಧಾನದ ಸಾರ್ಥಕತೆ


ಸಂಪಾದಕರು: ಗ್ಯಾನಪ್ಪ ದೊಡ್ಡಮನಿ 
ವರದಿ:ಶರಣಪ್ಪ.ಬಿ.ಹೆಚ್.ಬಾಗಲಕೋಟೆ
ಬಾಗಲಕೋಟೆ, ನವೆಂಬರ್ 27 : ಇಲಕಲ್ಲ ತಾಲೂಕಿನ ಕೆಲೂರ ಗ್ರಾಮದ ಶ್ರೀ ಗುರು ಮಂಟೇಶ್ವರ ಪ್ರೌಢಶಾಲೆ ಕೆಲೂರಿನಲ್ಲಿ ಸಂವಿಧಾನ ದಿನವನ್ನು ‘ಭಾರತ-ಪ್ರಜಾಪ್ರಭುತ್ವದ ತಾಯಿ’ ಎಂಬ ಧ್ಯೇಯ ವಾಕ್ಯದೊಂದಿಗೆ ಬೆಳಿಗ್ಗೆ 11 ಕ್ಕೆ ಆಚರಿಸಲಾಯಿತು. 

ಇಂದು ಸಂವಿಧಾನ ದಿನ ಆಚರಣೆ ಹಿನ್ನೆಲೆ, ಶಾಲೆಯ ಮುಖ್ಯೋಪಾಧ್ಯಾಯರು ​ಸೇರಿದಂತೆ ಎಲ್ಲ ಸಿಬ್ಬಂದಿವರ್ಗದವರು ಶಾಲೆಯ ವಿದ್ಯಾರ್ಥಿಗಳಿಗೆ ಶುಭಾಶಯಗಳನ್ನು ಕೋರಿದರು.

ಸ್ವತಂತ್ರ ಭಾರತದ ಇತಿಹಾಸದಲ್ಲಿ ನವೆಂಬರ್ 26ಕ್ಕೆ ತನ್ನದೇ ಆದ ವಿಶೇಷ ಮಹತ್ವವಿದೆ.ಭಾರತ ತನ್ನ ಸಂವಿಧಾನವನ್ನು ಅಂಗೀಕರಿಸಿದ ದಿನ ಇದು.1946 ರಲ್ಲಿ, ಸಂವಿಧಾನವನ್ನು ರಚಿಸಲು ಸಂವಿಧಾನ ಸಭೆಯನ್ನು ರಚಿಸಲಾಯಿತು ಮತ್ತು ಅದನ್ನು ರಚಿಸಲು 2 ವರ್ಷ, 11 ತಿಂಗಳು ಮತ್ತು 18 ದಿನಗಳನ್ನು ತೆಗೆದುಕೊಂಡಿತು.ಭಾರತದ ಸಂವಿಧಾನವನ್ನು 26 ನವೆಂಬರ್ 1949 ರಂದು ಸಿದ್ಧಪಡಿಸಲಾಯಿತು ಮತ್ತು ಇದನ್ನು 26 ಜನವರಿ 1950 ರಂದು ಜಾರಿಗೆ ತರಲಾಯಿತು. ನಮ್ಮ ಸಂವಿಧಾನದ ಸದಾಶಯಗಳನ್ನು ಸಂರಕ್ಷಿಸುವ ಹಾಗೂ ಪಾಲಿಸುವ ದೃಢನಿಶ್ಚಯದೊಂದಿಗೆ , ಸಂವಿಧಾನದ ಕರ್ತೃಗಳನ್ನು ಸ್ಮರಿಸಿ, ಸಂವಿಧಾನಕ್ಕೆ ಸದಾ ಬದ್ಧವಾಗಿರುವ ಸಂಕಲ್ಪವನ್ನು ಮಾಡೋಣ ಎಂದು ಪ್ರ.ಮುಖ್ಯೋಪಾಧ್ಯಾಯರಾದ ಎಸ್.ಬಿ.ಹೆಳವರ ಮಾತನಾಡಿದರು.

ಈ ಸಂದರ್ಭದಲ್ಲಿ ಶಾಲಾ ಮಕ್ಕಳ ಜೊತೆ ಶಿಕ್ಷಕರು ಹಾಗೂ ಎಲ್ಲ ಸಿಬ್ಬಂದಿಯವರು ಸಂವಿಧಾನದ ಪೀಠಿಕೆಯನ್ನು ಓದಲಾಯಿತು.ಶಿಕ್ಷಕರಾದ ಬಿ.ಹೆಚ್.ನಾಲತವಾಡ ನಿರೂಪಿಸಿದರು,ಎಮ್.ಹೆಚ್.ಗ್ಬಾಗೇರಿ ಸ್ವಾಗತಿಸಿದರು,ಬಿ.ಎಸ್.ಕಮತರ ವಂದಿಸಿದರು.ದೈಹಿಕ ಶಿಕ್ಷಕರಾದ ಕುಶ ಬೀಳಗಿ,ಶಿಕ್ಷಕಿಯಾರಾದ ಶ್ರೀಮತಿ ಪಿ.ಎನ್.ಸಂಗಾನವರ,ಸಿಬ್ಬಂದಿಯವರಾದ ಆಯ್.ಎಸ್.ಮಂಡಿ,ಎಸ್.ಬಿ.ನಾಯ್ಕರ ಉಪಸ್ಥಿತರಿದ್ದರು.


Post a Comment

Previous Post Next Post