ಮಸ್ಕಿ ಬಿ, ಎಂ,ಎಲ್ ಶಾಲೆಯ ವಿದ್ಯಾರ್ಥಿನಿ,ಕು ತಮನ್ನಾ ಎತ್ತರ ಜಿಗಿತದ ಸ್ಪರ್ಧೆಯಲ್ಲಿ -ರಾಜ್ಯ ಮಟ್ಟಕ್ಕೆ ಆಯ್ಕೆ

ಸಂಪಾದಕರು: ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಮಸ್ಕಿ, ನವೆಂಬರ್ 18 : ಮಸ್ಕಿ ಬಿ, ಎಂ,ಎಲ್ ಶಾಲೆಯ ವಿದ್ಯಾರ್ಥಿನಿ,ಕು ತಮನ್ನಾ ಎತ್ತರ ಜಿಗಿತದ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯ ಮಟ್ಟಕ್ಕೆ ಆಯ್ಕೆ ಶಾಲಾ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದ್ದಾರೆ.

ರಾಯಚೂರು ಜಿಲ್ಲಾ ಮಟ್ಟದ ವೈಯಕ್ತಿಕ ಸ್ಪರ್ಧೆಯು ಲಿಂಗಸಗೂರು ಪಟ್ಟಣದಲ್ಲಿ ಬುಧವಾರ ನಡೆದ 14 ವರ್ಷ ವಯೋಮಿತಿಯ 2022-23ಶೈಕ್ಷಣಿಕ ಸಾಲಿನ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಎತ್ತರ ಜಿಗಿತದ ಸ್ಪರ್ಧೆಯಲ್ಲಿ 7 ನೇ ತರಗತಿಯ ಮಸ್ಕಿ ಬಿ, ಎಂ,ಎಲ್ ಶಾಲೆಯ ವಿದ್ಯಾರ್ಥಿನಿ ಕು ತಮನ್ನಾ ತಂದೆ ಶರೀಫ್ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ ಜಿಲ್ಲಾ ಮಟ್ಟದಲ್ಲಿ ಉತ್ತಮ ಸಾಧನೆ ತೋರಿ ಪ್ರಶಸ್ತಿ ಪಡೆದುಕೊಂಡು ಶಾಲೆಗೆ ಕೀರ್ತಿ ತಂದಿದ್ದಾಳೆ.ಈ ವಿಧ್ಯಾರ್ಥಿನಿಯ ಸಾಧನೆಗೆ ಹಾಗೂ ಮಾರ್ಗದರ್ಶನ ಮಾಡಿದ ಶ್ರೀ ಶಿವಪ್ಪ ಕುರಿ ಇವರಿಗೆ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಬಿ ಎಂ ಎಲ್ ಶಾಲೆಯ ಮುಖ್ಯ ಗುರುಗಳು ಮೌನೇಶ ಹೊಸಮನಿ ಮಾದ್ಯಮ ಹೇಳಿಕೆ ಮೂಲಕ ತಿಳಿಸಿದ್ದಾರೆ.

Post a Comment

Previous Post Next Post