2023 ರ ವಿಧಾಸಭಾ ಚುನಾವಣೆಯಲ್ಲಿ ಫಲಿತಾಂಶವು ಕಾಂಗ್ರೇಸ್ ಪಕ್ಷಕ್ಕೆ ಒಳಿದು ಬರಲಿದೆಯೇ..?




ಉಪ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ
ವರದಿ: ಚೇತನ ಕೆಂದೂಳಿ, ಮುದ್ದೇಬಿಹಾಳ
ಮುದ್ದೇಬಿಹಾಳ(ವಿಜಯಪುರ) ಏಪ್ರಿಲ್ 10 :  ಕಾಂಗ್ರೇಸ್ ಭದ್ರಕೋಟೆಯಾಗಿದ್ದ ಮುದ್ದೇಬಿಹಾಳ ಮತಕ್ಷೇತ್ರವನ್ನು ಮರಳಿ ತನ್ನ ಆಡಳಿತಕ್ಕೆ ತೆಗೆದುಕೊಳ್ಳುವಲ್ಲಿ ಈ ಬಾರಿ ಚುನಾವಣೆ ತಂತ್ರಗಾರಿಕೆಯನ್ನು ಮಾಡಲಾಗುತ್ತಿದೆ. ಇದರಿಂದ 2023 ವಿಧಾಸಭಾ ಚುನಾವಣೆಯಲ್ಲಿ ಫಲಿತಾಂಶವು ಕಾಂಗ್ರೇಸ್ ಪಕ್ಷಕ್ಕೆ ಒಳಿದು ಬರಲಿದೆ...?

ಕಾಂಗ್ರೇಸ್ ಭದ್ರಕೋಟೆಯಾಗಿದ್ದ ಮುದ್ದೇಬಿಹಾಳ ಮತಕ್ಷೇತ್ರವನ್ನು ಪ್ರಪ್ರಥಮ ಬಾರಿಗೆ ಕಮಲಕ್ಕೆ ಅಧಿಕಾರ ಹಸ್ಥಾಂತರ ಮಾಡಿದ ಹಿರಿಮೆ ಎ.ಎಸ್.ಪಾಟೀಲ ನಡಹಳ್ಳಿ ಅವರಿಗೆ ಸಲ್ಲುತ್ತದೆ. ಆದರೆ ಕ್ಷೇತ್ರದಲ್ಲಿ ರಸ್ತೆಗಳ ಅಭಿವೃದ್ಧಿಯಾಗಿದ್ದು ಇನ್ನೀತರ ಅಭಿವೃದ್ಧಿ ಕಡೆಗೆ ನಡಹಳ್ಳಿ ಅವರು ಗಮನ ಹರಿಸಿಲ್ಲ ಹಾಗೂ ಹಿಂದಿನ ಚುನಾವಣೆಯಲ್ಲಿ ಮುದ್ದೇಬಿಹಾಳ ಮಂಡಲದ ಬಿಜೆಪಿ ಪಕ್ಷದ ಸರ್ವ ಮುಖಂಡರನ್ನು ಜೊತೆಗೂಡಿಸಿಕೊಂಡಿದ್ದ ನಡಹಳ್ಳಿ ಅವರು ಶಾಸಕರಾದ ನಂತರ ಪಕ್ಷದ ಮೂಲ ಕಾರ್ಯಕರ್ತರನ್ನು ಕಡೆಗೆಣಿಸಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇದರಿಂದ ಈಗಾಗಲೇ ಕೆಲ ಬಿಜೆಪಿ ಮುಖಂಡರು ಪಕ್ಷ ತೊರೆದರೆ ಇನ್ನೂ ಕೆಲ ಕಾರ್ಯಕರ್ತರು ಪಕ್ಷದಲ್ಲಿಯೇ ಇದ್ದುಕೊಂಡು ನಡಹಳ್ಳಿ ಅವರ ವಿರುದ್ಧ ಧ್ವನಿ ಎತ್ತಿದ್ದಾರೆ. ಇದರಿಂದ ಕ್ಷೇತ್ರದಲ್ಲಿ ಪಕ್ಷದ ಟಿಕೇಟ್ ಪಕ್ಕಾ ಮಾಡಲು ಬಿಜೆಪಿ ಹೈಕಮಾಂಡ ಎಲ್ಲ ರೀತಿಯಲ್ಲಿಯೂ ಒಳ ಮಾಹಿತಿ ಪಡೆಯುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

25 ವರ್ಷಗಳ ಅಭಿವೃದ್ಧಿ ಬಗ್ಗೆ ಪ್ರಚಾರಪಡಿಸಿದ ಮಾಜಿ ಸಚಿವ ಸಿ.ಎಸ್.ನಾಡಗೌಡ ಅಪ್ಪಾಜಿ:

ಮುದ್ದೇಬಿಹಾಳ ಮತಕ್ಷೇತ್ರದಲ್ಲಿ 25 ವರ್ಷಗಳ ಕಾಲ ಸಚಿವ ಹಾಗೂ ಶಾಸಕರಾಗಿ ಅಧಿಕಾರ ಚಲಾಯಿಸಿದ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ತಮ್ಮ ಅವಧಿಯಲ್ಲಿ ಕ್ಷೇತ್ರದಲ್ಲಿ ಮಾಡಿದಂತಹ ಅಭಿವೃದ್ಧಿಯ ಬಗ್ಗೆ ಹೆಚ್ಚಿನ ಪ್ರಚಾರ ಮಾಡಿಲ್ಲಾ. ಇದರಿಂದ ನಾಡಗೌಡ ಅವರು ಮಾಡಿದಂತಹ ಅಭಿವೃದ್ಧಿಗಳು ಇಂದಿನ ಯುವ ಪೀಳಿಗೆಗೆ ತಿಳಿದಿಲ್ಲಾ. ಇದಕ್ಕಾಗಿ ನಾಡಗೌಡ ಅವರು ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಬಗ್ಗೆ ಈಗಾಗಲೇ ಜನರಿಗೆ ಮಾಹಿತಿ ನೀಡುವಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಮಾಡುತ್ತಿದ್ದಾರೆ. ಇದರಿಂದ ಈಗಾಗಲೇ ಸಾಕಷ್ಟು ಯುವಕರು ನಾಡಗೌಡ ಅವರ ಸಾಧನೆ ಬಗ್ಗೆ ತಿಳಿದುಕೊಂಡು ಅವರಿಗೆ ಬೆಂಬಲ ಸೂಚಿಸುತ್ತಿದ್ದಾರೆ ಎಂದು ಶಾಂತಗೌಡ ಪಾಟೀಲ ನಡಹಳ್ಳಿ ಅಭಿಮಾನಿಗಳು ತಿಳಿಸಿದ್ದಾರೆ.

ನಡಹಳ್ಳಿಯದು ಅಬ್ಬರದ ಪ್ರಚಾರ: ಸಾಧನೆ ಶೂನ್ಯ...!!!

 ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಕೇವಲ ಸಿಸಿ ರಸ್ತೆಗಳು ಬಿಟ್ಟರೆ ನಡಹಳ್ಳಿ ಅವರು ಮಾಡಿದ ಸಾಧನೆ ಏನೂ ಇಲ್ಲಾ. ಅಲ್ಲದೇ ಈಗಾಗಲೇ ಮುದ್ದೇಬಿಹಾಳ ಪಟ್ಟಣದ ಪ್ರಮುಖ ರಸ್ತೆಯಾಗಿರುವ ಬಸವೇಶ್ವರ ವೃತ್ತದಿಂದ ಇಂದಿರಾ ವೃತ್ತದವರೆಗೂ ಮಾಡಿರುವ ಸಿಸಿ ರಸ್ತೆ ಸಂಪೂರ್ಣ ಅವೈಜ್ಞಾನಿಕವಾಗಿದೆ. ಹಿಂದೆ ಮುದ್ದೇಬಿಹಾಳ ಪಟ್ಟಣದಲ್ಲಿ ಸುರಿದ ಮಳೆಯಿಂದ ಮುಖ್ಯರಸ್ತೆಯಿಂದ ಮಳೆ ನೀರು ಸರಾಗವಾಗಿ ಸಾಗದೇ ಅಕ್ಕಪಕ್ಕದಲ್ಲಿದ್ದ ಅಂಗಡಿಗಳಿಗೆ ಹಾಗೂ ಬಡವರ ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಯಿತು. ಅಂದು ಜನರ ಕಣ್ಣು ತಪ್ಪಿಸಲು ಯತ್ನಿಸಿದ ಪ್ರತಿನಿಧಿಗಳು ಮೇಲಾಧಿಕಾರಿಗಳನ್ನು ಹಾಗೂ ಸಚಿವರನ್ನು ಮುದ್ದೇಬಿಹಾಳ ಪಟ್ಟಣಕ್ಕೆ ಕರೆಸಿ ಹಾನಿಯಾದ ಬಗ್ಗೆ ಮಾಹಿತಿಯನ್ನು ನೀಡಿ ತಕ್ಕ ಪರಿಹಾರ ನೀಡುವುದಾಗಿ ಹೇಳಿದ್ದರು. ಆದರೆ ಪರಿಹಾರ ನೀಡಿದ ಬಗ್ಗೆ ಇಲ್ಲಿಯವರೆಗೂ ಯಾವುದೇ ಮಾಹಿತಿ ಇಲ್ಲದಂತಾಗಿದೆ. ಜನರ ನೋಟ ಬೇರೆಕಡೆವಾಲಿಸುವುದೇ ನಡಹಳ್ಳಿ ಅವರ ತಂತ್ರಗಾರಿಕೆಯಾಗಿದೆ ಎಂದು ಕಾಂಗ್ರೇಸ್ ಪಕ್ಷದ ಮುಖಂಡರು ಆರೋಪಿಸಿದ್ದಾರೆ.

ನಾಡಗೌಡರಿಗೆ ಬೆಂಬಲ ಸೂಚಿಸಿದ ಶಾಂತಗೌಡ ಪಾಟೀಲ ನಡಹಳ್ಳಿ:

2013ರ ವಿಧಾಸಭಾ ಚುನಾವಣೆಯಲ್ಲಿ ಪಕ್ಷೇತ್ರರ ಅಭ್ಯರ್ಥಿಯಾಗಿ ತುಂಬಿದಕೊಡ ಗುರುತು ಪಡೆದುಕೊಂಡು ಸ್ಪರ್ಧೆಮಾಡಿದ್ದ ಶಾಂತಗೌಡ ಪಾಟೀಲ ನಡಹಳ್ಳಿ ಅವರು ಶೇ.16.44ರಷ್ಟು ಮತಗಳನ್ನು ಪಡೆದು ತೃತೀಯಸ್ಥಾನ ಪಡೆದಿದ್ದರೂ ಮುದ್ದೇಬಿಹಾಳ ಮತಕ್ಷೇತ್ರದಲ್ಲಿಯೇ ಇತಿಹಾಸ ನಿರ್ಮಿಸಿದಂತಾಗಿತ್ತು. ಆದರೆ ಅಂದು ದೇ.ಹಿಪ್ಪರಗಿ ಮತಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಶಾಂತಗೌಡ ಅವರ ಸಹೋದರ ಅಮೀನಪ್ಪಗೌಡ ಪಾಟೀಲ ನಡಹಳ್ಳಿ ಅವರು 2018ರ ಚುನಾವಣೆಯಲ್ಲಿ ಮುದ್ದೇಬಿಹಾಳ ಮತಕ್ಷೇತ್ರಕ್ಕೆ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡಿದ ಸಂದರ್ಭದಲ್ಲಿ ಶಾಂತಗೌಡ ಪಾಟೀಲ ನಡಹಳ್ಳಿ ಅವರು ತಾವು ಹಿಂದೆ ಮುದ್ದೇಬಿಹಾಳ ಕ್ಷೇತ್ರದಲ್ಲಿ ಯುವಕರ ಪಡೆಯನ್ನು ಒಗ್ಗೂಡಿಸಿ ಅವರ ಸಹೋದರರಿಗೆ ಬೆಂಬಲಿಸುವಂತೆ ಸೂಚಿಸಿ ಹಗಲು ರಾತ್ರಿ ಕ್ಷೇತ್ರದಲ್ಲಿ ಎ.ಎಸ್.ಪಾಟೀಲ ನಡಹಳ್ಳಿ ಪರವಾಗಿ ಪ್ರಚಾರಿಸಿದ್ದರು. ಅಲ್ಲದೇ ಹಿಂದೆಂದೂ ಮುದ್ದೇಬಿಹಾಳ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಾರದ ಕಾರಣ ಎಲ್ಲಾ ಬಿಜೆಪಿ ಮುಖಂಡರೂ ನಡಹಳ್ಳಿ ಅವರಿಗೆ ಸಾಥ್ ನೀಡಿದ್ದರು. ಆದರೆ ಚುನಾವಣೆಯಲ್ಲಿ ಗೆದ್ದ ನಂತರ ಎ.ಎಸ್.ಪಾಟೀಲ ನಡಹಳ್ಳಿ ಅವರು ಬಹುತೇಕ ಬಿಜೆಪಿ ಮುಖಂರನ್ನು ಕೈಬಿಟ್ಟು ಕೊನೆಗೆ ತಮ್ಮ ಸಹೋದರ ಶಾಂತಗೌಡ ಪಾಟೀಲ ನಡಹಳ್ಳಿ ಅವರನ್ನೂ ಕೈಬಿಟ್ಟಿದ್ದು ಎ.ಎಸ್.ಪಾಟೀಲ ನಡಹಳ್ಳಿ ಅವರಿಗೆ 2023ರ ಚುನಾವಣೆ ನುಂಗಲಾರದ ತುತ್ತಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈಗಾಗಲೇ ಎ.ಎಸ್.ಪಾಟೀಲ ನಡಹಳ್ಳಿ ಸಹೋದರ ಶಾಂತಗೌಡ ಪಾಟೀಲ ನಡಹಳ್ಳಿ ಅವರು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಗೊಂದು ಮಾಜಿ ಸಚಿವ ಸಿ.ಎಸ್.ನಾಡಗೌಡ ಅಪ್ಪಾಜಿ ಅವರ ಪರವಾಗಿ ಪ್ರಚಾರ ಕೈಗೊಂಡಿದ್ದು ಹಿಂದೆ ತಾವು ಒಗ್ಗೂಡಿಸಿದ್ದ ಯುವಕರಪಡೆಯನ್ನು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆ ಮಾಡಿದ್ದಾರೆ. ಇದರಿಂದ ಮುದ್ದೇಬಿಹಾಳ ಕ್ಷೇತ್ರದಲ್ಲಿ ನಾಡಗೌಡ ಅವರ ಗೆಲವು ನಿಶ್ಚಿತವಾಗಿದೆ...? ಎಂದು ಹೇಳಲಾಗುತ್ತಿದೆ.

Post a Comment

Previous Post Next Post