ರಾಯಲ್ ಚಾಲೆಂಜರ್ಸ್ ಬೆಂಗಳೂರು ಜತೆ ಕತಾರ್ ಏರ್‍ವೇಸ್ ಕ್ರೀಡಾ ಪ್ರಾಯೋಜಕತ್ವ




ಉಪ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಬೆಂಗಳೂರು, ಮಾರ್ಚ್ 31 : ಕತಾರ್ ಏರ್‍ವೇಸ್ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ `ಇಂಡಿಯನ್ ಪ್ರೀಮಿಯರ್ ಲೀಗ್’ನ ಮೆಯಿನ್ ಪ್ರಿನ್ಸಿಪಲ್ ಪಾರ್ಟ್‍ನರ್ ಆಗಿ ಹಲವು ವರ್ಷಗಳ ಒಡಂಬಡಿಕೆಯ ಅನಾವರಣ.

ಅಭಮಾನಿಗಳು ಈಗ ಅಲ್ಟಿಮೇಟ್ ಆರ್‍ಸಿಬಿ ಫ್ಯಾನ್ ಪ್ಯಾಕೇಜ್‍ಗಳನ್ನು ಪಡೆಯಲಿದ್ದು ಅದರಲ್ಲಿ ಕತಾರ್ ಏರ್‍ವೇಸ್ ರಿಟರ್ನ್ ಫ್ಲೈಟ್‍ಗಳು, ಪ್ರೀಮಿಯಂ ಹೋಟೆಲ್ ಆಯ್ಕೆಗಳು, ಐಪಿಎಲ್ ಟಿಕೆಟ್‍ಗಳು ಮತ್ತು qatarairways.com/RCB ಮೂಲಕ ಉತ್ಸಾಹಕರ ಅನುಭವಗಳು ಹೊಂದಿವೆ.  

ದೋಹಾ, ಕತಾರ್- ಕತಾರ್ ಏರ್‍ವೇಸ್ ತನ್ನ ಹೊಚ್ಚಹೊಸ ಪಾಲುದಾರಿಕೆಯನ್ನು ಕ್ಲಬ್ ಕ್ರಿಕೆಟ್‍ನ ದಿಗ್ಗಜರಾದ ದಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‍ಸಿಬಿ)ನೊಂದಿಗೆ ಪ್ರಕಟಿಸಿದ್ದು ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ತಂಡದ ಅಧಿಕೃತ ಫ್ರಂಟ್ ಆಫ್ ಜೆರ್ಸೀ ಪಾರ್ಟ್‍ನರ್ ಆಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ 2023 ಸೀಸನ್ ಮಾರ್ಚ್ 31ರಿಂದ ಮೇ 28ರವರೆಗೆ ನಡೆಯಲಿದ್ದು ಬೆಂಗಳೂರಿನ ಕ್ರಿಕೆಟ್ ತಂಡವು ಪ್ರಾರಂಭಿಕ ಪಂದ್ಯದಲ್ಲಿ ಏಪ್ರಿಲ್ 2ರಂದು ಮುಂಬೈ ಇಂಡಿಯನ್ಸ್ ಅವರನ್ನು ಎದುರಿಸಲಿದ್ದಾರೆ. 40,000ಕ್ಕೂ ಹೆಚ್ಚು ಕ್ರಿಕೆಟ್ ಪ್ರಿಯರ ಉಪಸ್ಥಿತಿಯಲ್ಲಿ ಆರ್‍ಸಿಬಿಯ ತವರು ನೆಲದಲ್ಲಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿಶೇಷವಾದ “ಅನ್‍ಬಾಕ್ಸಿಂಗ್ ಕಾರ್ಯಕ್ರಮ” ಆಯೋಜಿಸಿದ್ದು ಅದರಲ್ಲಿ ಕ್ರಿಕೆಟ್‍ನ ಖ್ಯಾತನಾಮರು, ಸೆಲೆಬ್ರಿಟಿಗಳು, ತಂಡದ ಅಧಿಕಾರಿಗಳು ಮತ್ತು ಕ್ರಿಕೆಟ್ ಸೂಪರ್‍ಸ್ಟಾರ್‍ಗಳಾದ ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸ್ಸಿಸ್ ಮತ್ತು ಗ್ಲೆನ್ ಮ್ಯಾಕ್ಸ್‍ವೆಲ್ ಇರುತ್ತಾರೆ. ಅಭಿಮಾನಿಗಳು ಆರ್‍ಸಿಬಿ ತಂಡವನ್ನು ಮನರಂಜಿಸುವ ವಾತಾವರಣದಲ್ಲಿ ತರಬೇತಿ ಹೊಂದುವುದನ್ನು ಕಾಣಲಿದ್ದು ನಂತರ ಕತಾರ್ ಏರ್‍ವೇಸ್‍ನ ಕ್ಯಾಬಿನ್ ಸಿಬ್ಬಂದಿಯು ಈ ವಿಶೇಷ ಜೆರ್ಸೀ ಬಿಡುಗಡೆ ಕಾರ್ಯಕ್ರಮದಲ್ಲಿ ತಂಡಕ್ಕೆ ಶುಭ ಹಾರೈಸಲಿದ್ದಾರೆ.

ಈ ಏರ್‍ಲೈನ್ಸ್‍ನ ಲೀಷರ್ ಡಿವಿಷನ್ ಕತಾರ್ ಏರ್‍ವೇಸ್ ಹಾಲಿಡೇಸ್ ವಿಶೇಷವಾಗಿ ಎಲ್ಲವನ್ನೂ ಒಳಗೊಂಡ ಟ್ರಾವೆಲ್ ಪ್ಯಾಕೇಜ್‍ಗಳನ್ನು ಬಿಡುಗಡೆ ಮಾಡುತ್ತಿದ್ದು ಕ್ರಿಕೆಟ್ ಅಭಿಮಾನಿಗಳಿಗೆ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿನ ಕತಾರ್ ಏರ್‍ವೇಸ್ ಹಾಸ್ಪಿಟಾಲಿಟಿ ಲೌಂಜ್‍ನಲ್ಲಿ ಐಪಿಎಲ್ ಪಂದ್ಯದಲ್ಲಿ ಭಾಗವಹಿಸಲು ಅವಕಾಶ ನೀಡುತ್ತದೆ. ಇದರೊಂದಿಗೆ ಪ್ಯಾಕೇಜ್‍ಗಳಲ್ಲಿ ಅಭಿಮಾನಿಗಳಿಗೆ ಅಭ್ಯಾಸ ಪಂದ್ಯಗಳು, ಸಹಿಯಾಗಿರುವ ಸ್ಮರಣಿಕೆಗಳು, ಆಟಗಾರರ ಭೇಟಿ ಮತ್ತು ಶುಭ ಹಾರೈಕೆ, ವಿರಾಟ್ ಕೊಹ್ಲಿ ಅವರೊಂದಿಗೆ ಫೋಟೋ ತೆಗೆಸಿಕೊಳ್ಳುವ ಅವಕಾಶ ಮುಂತಾದವು ಇರುತ್ತವೆ.

ಕತಾರ್ ಏರ್‍ವೇಸ್ ಗ್ರೂಪ್‍ನ ಚೀಫ್ ಎಕ್ಸಿಕ್ಯೂಟಿವ್ ಅಕ್ಬರ್ ಅಲ್ ಬಕರ್, “ನಮ್ಮ ವಿಶೇಷ ಸ್ಪೋಟ್ರ್ಸ್ ಪೋರ್ಟ್‍ಫೋಲಿಯೊಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರ್ಪಡೆಯ ಮೂಲಕ ಹೊಸ ಪ್ರಯಾಣ ಪ್ರಾರಂಭಿಸಿದ್ದೇವೆ. ಈ ತಂಡಕ್ಕೆ ಅಪಾರ ಆಸಕ್ತಿಯ ಅಭಿಮಾನಿ ಬಳಗವಿದೆ ಮತ್ತು ತಂಡಕ್ಕೆ ಆಟವಾಡಿದ ಖ್ಯಾತ ಕ್ರಿಕೆಟ್ ಪಟುಗಳಿದ್ದಾರೆ. ಪ್ರಾರಂಭದಿಂದ ಅಂತ್ಯದವರೆಗೂ ನಮ್ಮ ಆರ್‍ಸಿಬಿ ಪ್ಯಾಕೇಜ್‍ಗಳು ಅಭಿಮಾನಿಗಳ ಅನುಭವವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲಿದ್ದು ವಿಶ್ವ ಮಟ್ಟದ ಕ್ರಿಕೆಟ್ ಮತ್ತು ಮನರಂಜನೆಯ ಅನುಭವ ಪಡೆಯುವ ತಡೆರಹಿತ ಪ್ರಯಾಣ ನೀಡುತ್ತವೆ” ಎಂದರು.

“ಕತಾರ್ ಏರ್‍ವೇ ಭಾರತವನ್ನು ಪ್ರಮುಖ ಮಾರುಕಟ್ಟೆ ಎಂದು ಪರಿಗಣಿಸಿದ್ದು ನಾವು 13 ನಗರಗಳಿಂದ ತಡೆರಹಿತ ವಿಮಾನಗಳನ್ನು ಸಂಚರಿಸುತ್ತಿದ್ದೇವೆ. ಮುಂದಿನ ಮೂರು ವರ್ಷಗಳು ನಾವು ಆರ್‍ಸಿಬಿಯೊಂದಿಗೆ ಸಹಯೋಗಕ್ಕೆ ಬಹಳ ಉತ್ಸುಕರಾಗಿದ್ದು ಅದು ಯಶಸ್ವಿ ಸಹಯೋಗ ಎಂದು ನಂಬಿದ್ದೇವೆ” ಎಂದರು.

ಕತಾರ್ ಏರ್‍ವೇಸ್ ಪ್ರಸ್ತುತ ವಿಶ್ವದಾದ್ಯಂತ 150ಕ್ಕೂ ಹೆಚ್ಚು ತಾಣಗಳಿ ಹಾರಾಟ ನಡೆಸುತ್ತಿದ್ದು ತನ್ನ ಹಮದ್ ಇಂಟರ್‍ನ್ಯಾಷನಲ್ ಏರ್‍ಪೋರ್ಟ್‍ನ ದೋಹಾ ಹಬ್ ಅನ್ನು ಸಂಪರ್ಕಿಸುತ್ತಿದ್ದು ಸ್ಕೈಟ್ರಾಕ್ಸ್‍ನಿಂದ 2022ರಲ್ಲಿ `ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣ’ ಎಂಬ ಪುರಸ್ಕಾರ ಪಡೆದಿದೆ.

Post a Comment

Previous Post Next Post