UDAYAVANI NEWS
ಯಾದಗಿರಿ, ಮಾರ್ಚ್ 25 : ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಗೌಡಗೇರಾ ಗ್ರಾಮದ ರೈತರ ಜಮೀನು ಒಂದರಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿರುವ ಖಚಿತ ಮಾಹಿತಿಯ ಮೇರೆಗೆ ಹುಣಸಗಿ ಪೋಲಿಸ್ ಠಾಣಾ ಸಿಪಿಐ ಎಂಬಿ ಚಿಕ್ಕಣ್ಣವರ್, ಕೆಂಭಾವಿ ಪೋಲೀಸ್ ಠಾಣಾ ಪಿಎಸ್ಐ ಹನುಮಂತ ,ಎಎಸ್ಐ ಬಲರಾಮ್ ಸಿಬ್ಬಂದಿಗಳಾದ ನಾರಾಯಣ, ಬಾಬು ನಾಯ್ಕಲ್, ಬಸವರಾಜ, ಶಿವುರಾಜ್, ಖಾನ್ ಗೌಡ್ರು, ಪ್ರಭುಗೌಡ, ಮಾಳಪ್ಪ ತಂಡದೊಂದಿಗೆ ದಾಳಿ ಮಾಡಿ ಸುಮಾರು ಒಂಭತ್ತು ಲಕ್ಷ ರೂಪಾಯಿ ಮೌಲ್ಯದ ಗಾಂಜಾವನ್ನು ಜಪ್ತಿ ಮಾಡಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಸಲಾಗಿದೆ ಎಂದು ತಿಳಿದು ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆಂಭಾವಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Tags
ಜಿಲ್ಲಾ ಸುದ್ದಿಗಳು