ತಳವಾರ ಮತ್ತು ಪರಿವಾರ ನಾಯಕ ಜಾತಿಗಳನ್ನು ರಾಜ್ಯದ ಹಿಂದುಳಿದ ವರ್ಗಗಳ ಮೀಸಲಾತಿ ಜಾತಿ ಪಟ್ಟಿಯಿಂದ ತೆಗೆದುಹಾಕಿ: ರಾಜ್ಯ ಸರ್ಕಾರ ಆದೇಶ




ಉಪ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ
UDAYAVANI NEWS
ಬೆಂಗಳೂರು, ಮಾರ್ಚ್ 29 : ಪರಿಶಿಷ್ಟ ಪಂಗಡದ ಮೀಸಲಾತಿ ಪಟ್ಟಿಗೆ ಸೇರ್ಪಡೆಯಾಗಿರುವ ತಳವಾರ ಮತ್ತು ಪರಿವಾರ ನಾಯಕ ಜಾತಿಗಳನ್ನು ರಾಜ್ಯದ ಹಿಂದುಳಿದ ವರ್ಗಗಳ ಮೀಸಲಾತಿ ಜಾತಿ ಪಟ್ಟಿಯಿಂದ ತೆಗೆದುಹಾಕಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
 
ಅಮರೇಶಣ್ಣ ಕಾಮನಕೇರಿ ಯವರು
ಬಿಜೆಪಿ ವಿರುದ್ಧ ಗಂಭೀರ ಆರೋಪ
ತಳವಾರ ಜಾತಿ ಜನರಿಗೆ ಬಿಜೆಪಿ ಮೋಸ ಮಾಡುವ ಹುನ್ನಾರ ಕೂಡ ಮಾಡಿದೆ ತಳವಾರ ಹಿಂದುಳಿದ ವರ್ಗದಿಂದ ತೆಗೆದಿದ್ದೆ ಎಂದು ಹೇಳುವ ಬಿಜೆಪಿ ತಳವಾರ ಎಂದು ಎಸ ಟಿ ಪ್ರಮಾಣ ಪತ್ರ ನೀಡದೆ ನಾಯ್ಕಡ ( ಪರಿವಾರ ತಳವಾರ) ನಾಯಕ( ಪರಿವಾರ ತಳವಾರ) ಎಂದು ನೀಡಿ ತಳವಾರರಿಗೆ ಅನ್ಯಾಯ ಮಾಡಲು ಹುನ್ನಾರ ಮಾಡಿದೆ ಮುಂದೆ ತಳವಾರ ಸಮಾಜ ಎಸ ಟಿ ಪ್ರಮಾಣ ಪತ್ರದಿಂದ ತೊಂದರೆಗೆ ಒಳಗಾದರೆ ಅದಕ್ಕೆ ಬಿಜೆಪಿ ನೆ ಕಾರಣ ಅಲ್ಲದೆ 88 h ನಲ್ಲಿ ತಳವಾರ ಬೋಯ ಸಂವಿಧಾನ ಬಾಹಿರವಾಗಿ ಉಳಿಸಿದೆ.
ಕರ್ನಾಟಕ ರಾಜ್ಯದ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿನ ಪರಿವಾರ ನಾಯಕ ಮತ್ತು ತಳವಾರ ಜಾತಿಗಳನ್ನು ಸೇರಿಸಿರುವ ಹಿನ್ನೆಲೆಯಲ್ಲಿ ಸದರಿ ಜಾತಿಗಳಿಗೆ ಸರ್ಕಾರವು ಪರಿಶಿಷ್ಟ ಪಂಗಡದ ಪ್ರಮಾಣ ಪತ್ರಗಳನ್ನು ವಿತರಿಸಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಲಾಗಿರುತ್ತದೆ.

Post a Comment

Previous Post Next Post