ವಿಲಾಸಿ ಕಾರುಗಳ ಶ್ರೇಣಿಗಾಗಿ ಬ್ರೇಕ್ ಪ್ಯಾಡ್‍ಗಳನ್ನು ಬಿಡುಗಡೆ ಮಾಡಿದ ಬ್ರೇಕ್ಸ್ ಇಂಡಿಯಾ



ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಬೆಂಗಳೂರು, ಮಾರ್ಚ್ 24 : ಹೆಚ್ಚು ಉನ್ನತ ಪ್ರದರ್ಶನಕ್ಕಾಗಿ ಅನನ್ಯ ಅಬ್ರೇಸಿವ್ ಫಿಲ್ಮ್‍ನೊಂದಿಗೆ ವಿನ್ಯಾಸಗೊಳಿಸಲಾಗಿರುವ, ಬ್ರೇಕ್ಸ್ ಇಂಡಿಯಾದ ಫ್ರಿಕ್ಷನ್ ಬ್ರಾಂಡ್ ಆಗಿರುವ ಟಿವಿಎಸ್ ಅಪಾಚೆ, ವಿಲಾಸಿ ಕಾರುಗಳ ಶ್ರೇಣಿಗಾಗಿ ಪ್ಲಾಟಿನಂ ಬ್ರೇಕ್ ಪ್ಯಾಡ್‍ಗಳನ್ನು ಬಿಡುಗಡೆ ಮಾಡಿದೆ. 

ಇವುಗಳನ್ನು ಅನುಕೂಲಕರ ಮತ್ತು ಆಹ್ಲಾದ ನೀಡುವಂತಹ ಚಾಲನಾ ಅನುಭವಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಈ ಬ್ರೇಕ್ ಪ್ಯಾಡ್‍ಗಳು ವಿಲಾಸಿ ಪ್ರಮುಖ ವಾಹನಗಳ ಮುಂಭಾಗ ಮತ್ತು ಹಿಂಭಾಗಗಳೆರಡರ ಅಗತ್ಯಗಳನ್ನು ಪೂರೈಸುತ್ತವೆ.
ಬ್ರೇಕ್ ವ್ಯವಸ್ಥೆಗಳಲ್ಲಿ ಆರು ದಶಕಗಳ ತಂತ್ರಜ್ಞಾನ ನೈಪುಣ್ಯತೆ ಹೊಂದಿರುವ ಬ್ರೇಕ್ಸ್ ಇಂಡಿಯಾ, ಪ್ರಯಾಣಿಕ ಕಾರು ಘರ್ಷಣೆ ಮಾರುಕಟ್ಟೆಯಲ್ಲಿ ಪ್ರಮುಖ ಸಂಸ್ಥೆಯಾಗಿದೆ. “ನಾವು ಉನ್ನತೀಕರಿಸಿದ ಘರ್ಷಣಾ ತಂತ್ರಜ್ಞಾನದೊಂದಿಗೆ ಪ್ಲಾಟಿನಂ ಬ್ರೇಕ್ ಪ್ಯಾಡ್‍ಗಳನ್ನು ಅನಾವರಣಗೊಳಿಸುತ್ತಿದ್ದೇವೆ. ಅಲ್ಲದೇ ಪ್ರೀಮಿಯಂ ವಿಭಾಗದ ಅಗತ್ಯಗಳನ್ನು ಪೂರೈಸಲು ನಮ್ಮ ಶ್ರೇಣಿ ವಿಸ್ತರಿಸುತ್ತಿದ್ದೇವೆ. ಮೊದಲ ಹಂತದಲ್ಲಿ ಇದನ್ನು ಆಯ್ದ ವಿಲಾಶೀ ಕಾರು ಮಾದರಿಗಳಿಗೆ ಪರಿಚಯಿಸಲಾಗಿದ್ದು, ಮುಂಬರುವ ತಿಂಗಳುಗಳಲ್ಲಿ ಶ್ರೇಣಿ ವಿಸ್ತರಿಸಲಾಗುವುದು” ಎಂದು ಬ್ರೇಕ್ಸ್ ಇಂಡಿಯಾದ ಫ್ರಿಕ್ಷನ್ ಮತ್ತು ಆಫ್ಟರ್ ಮಾರ್ಕೆಟ್ ವ್ಯವಹಾರದ ಉಪಾಧ್ಯಕ್ಷ ಸುಜಿತ್ ಎಸ್. ನಾಯಕ್ ಹೇಳಿದ್ದಾರೆ.

ಬಳಕೆಯ ಅವಧಿಯೊಂದಿಗೆ ರಾಜಿ ಮಾಡಿಕೊಳ್ಳದೆ ಶಾಂತ ಮತ್ತು ಉನ್ನತ ಪ್ರದರ್ಶನದ ಬ್ರೇಕಿಂಗ್ ಪೂರೈಸಲು ಬ್ರೇಕ್ ಪ್ಯಾಡ್‍ಗಳನ್ನು ಪ್ರೀಮಿಯಂ ಫಾರ್ಮುಲೇಷನ್‍ಗಳೊಂದಿಗೆ ಜಾಗತಿಕ ನಿರ್ದಿಷ್ಟ ಮಾನದಂಡಗಳಿಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ ಎಂದು ಸುಜಿತ್ ಹೇಳಿದ್ದಾರೆ.

 ಮುಂಭಾಗದ ಬ್ರೇಕ್ ಪ್ಯಾಡ್‍ಗಳು ಜಾಗತಿಕ ನಿರ್ದಿಷ್ಟ ಮಾನದಂಡಗಳಿಗೆ ತಕ್ಕಂತೆ ಪ್ರೀಮಿಯಂ ತಾಮ್ರ ಮುಕ್ತ ಫಾರ್ಮುಲೇಷನ್‍ಗಳೊಂದಿಗೆ ಪರಿಸರ ಸ್ನೇಹಿಯಾಗಿರುತ್ತವೆ ಮತ್ತು ಎಸ್‍ಎಇ ಜೆ 2975 ರ ಪ್ರಕಾರ ಅತ್ಯುನ್ನತವಾದ ಎನ್ ಅನುಸರಣೆ ಮಟ್ಟವನ್ನು ಪೂರೈಸುತ್ತವೆ.

Post a Comment

Previous Post Next Post