ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ಉಪವಿಭಾಗದ ಎಇಇ ಮಂಗಳವಾರ ಸಂಜೆ ₹30 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ




ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಸವಣೂರು, ಫೆಬ್ರುವರಿ 16 : ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ಉಪವಿಭಾಗದ ಎಇಇ ಮಂಗಳವಾರ ಸಂಜೆ ₹30 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಕಲ್ಮಾಡು-ಕುಣಿಮೆಳ್ಳಿಹಳ್ಳಿ ಅರಣ್ಯ ಕಡಿಯುವ ಬಿಲ್ ಗೆ ಸಂಬಂಧಿಸಿದಂತೆ ಆರೋಪಿಗಳಾದ ಕಾರ್ಯಪಾಲಕ ಎಂಜಿನಿಯರ್ ನಿಂಬಣ್ಣ ಹೊಸಮನಿ ಗುತ್ತಿಗೆದಾರ ಲಚ್ಚಪ್ಪ (ಲಕ್ಷ್ಮಣ) ಕನವಳ್ಳಿ ಅವರಿಂದ ₹40 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

 ಹದಿನೈದು ದಿನಗಳಿಂದ ಬಿಲ್ ಪಡೆಯಲು ಅಲೆದಾಡಿ ಸುಸ್ತಾಗಿದ್ದ ಗುತ್ತಿಗೆದಾರರು ಕೊನೆಗೆ ₹30 ಸಾವಿರಕ್ಕೆ ಸೆಟಲ್ ಮಾಡಿ ಸಾಕ್ಷ್ಯ ಸಮೇತ ಹಾವೇರಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ. ಕಾರ್ಯಾಚರಣೆ ನಡೆಸಿದ ಹಾವೇರಿ ಲೋಕಾಯುಕ್ತರು ಆರೋಪಿಯನ್ನು ಗುತ್ತಿಗೆದಾರರಿಂದ ಲಂಚ ಸ್ವೀಕರಿಸುತ್ತಿದ್ದಾಗ ಬಂಧಿಸಿದ್ದಾರೆ.

ಇದೇ ವೇಳೆ ಹಾವೇರಿಯಲ್ಲಿರುವ ಎಇಇ ಮನೆ ಹಾಗೂ ಕಚೇರಿ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.

Post a Comment

Previous Post Next Post