ಒಳ ಮೀಸಲಾತಿ ಕೇಂದ್ರಕ್ಕೆ ಶಿಫಾರಸ್ಸು ಮಾಡಲು ಒತ್ತಾಯಿಸಿ, ಫ್ರೀಡಂ ಪಾರ್ಕ್ ಚಲೋ ಪಾದಯಾತ್ರೆಯ ಪೂರ್ವಭಾವಿ ಸಭೆ


ಸಂಪಾದಕರು: ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಮಸ್ಕಿ, ನವೆಂಬರ್ 26 : ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಲಿತ ಮುಖಂಡರ ನೇತೃತ್ವದಲ್ಲಿ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಜಾರಿ ಮಾಡುವ ಕುರಿತು ದಿನಾಂಕ 11-12-2022 ದಂದು ಫ್ರೀಡಂ ಪಾರ್ಕಿನಲ್ಲಿ ಬೃಹತ್ ಸಮಾವೇಶದ ಪ್ರಯುಕ್ತ ಬೆಂಗಳೂರು ಚಲೋ ಪಾದಯಾತ್ರೆಯ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ನ್ಯಾ. ಎ. ಜೆ ಸದಾ ಶಿವ ಆಯೋಗ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಲು ಒತ್ತಾಯಿಸಿ ಇದೇ ಡಿಸೆಂಬರ್ 11 ರಂದು ಬೆಂಗಳೂರಿನ ಫ್ರೀಂಪಾರ್ಕ್ ನಲ್ಲಿ ಹಮ್ಮಿಕೊಳ್ಳಲಾಗಿರುವ ಬೃಹತ್ ಸಮಾವೇಶದ ಪ್ರಯುಕ್ತ ತಾಲೂಕಿನ ಸಮುದಾಯದ ಎಲ್ಲಾ ಗಣ್ಯರ ಸಮ್ಮುಖದಲ್ಲಿ ಇದೇ ನವೆಂಬರ್ 28 ರಂದು ರಾಜ್ಯದ ದಲಿತ ಚಳುವಳಿಯ ಮಹಾ ನಾಯಕ ಪ್ರೋ// ಬಿ. ಕೃಷ್ಣಪ್ಪ ನವರ ಸಮಾಧಿಯಿಂದ ಹೊರಡುವ ಕಾಲ್ನಡಿಗೆ ಜಾಥಾವು ದಿನಾಂಕ 11-12-2022 ರಂದು ಫ್ರೀಡಂ ಪಾರ್ಕಿನಲ್ಲಿ ಬೃಹತ್ ಸಮಾವೇಶ ನಡೆಯಲಿದೆ ಆದ್ದರಿಂದ ಮುಂಚಿತವಾಗಿಯೇ ಎಲ್ಲವನ್ನೂ ಶಿಸ್ತು ಬದ್ಧವಾಗಿ ಸಿದ್ಧತೆ ಪಡಿಸಿಕೊಳ್ಳಬೇಕು ಎಂದು ಚರ್ಚೆ ನಡೆಸಲಾಯಿತು. ನಂತರ ಸಂಘಟನೆಗಳಿಗೆ ಆಯಾ ಸಂಘಟನೆಯ ಮುಖಂಡರು ಒಂದು ಕ್ರಷರ್ ಅನ್ನು ಮಾಡಿಕೊಂಡು ಬರಬೇಕು. ನಮ್ಮ ಸಮುದಾಯದ ಜನ ಸಂಖ್ಯೆಯ ತೋರ್ಪಡಿಸುವ ಜೊತೆ ಜೊತೆಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಲಾಗುವುದು ಎಂದು ಮುಖಂಡರ ಸಮಾಲೋಚನೆಯಲ್ಲಿ ನಿರ್ಧರಿಸಲಾಯಿತು. ಸಭೆಯ ಕೊನೆಗೆ ಒಳಮೀಸಲಾತಿ ಜಾರಿ ಕುರಿತ ಕಾಲ್ನಡಿಗೆಯ ಜಾಥಾದ ಪೋಸ್ಟರನ್ನು ಬಿಡುಗಡೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ

ಹನುಮಂತಪ್ಪ ಮುದ್ದಾಪೂರ,ಹನುಮಂತಪ್ಪ ಮನ್ನಾಪುರಿ M.R.H.S, ಅಬ್ರಹಾಂ ಹೊನ್ನಟಗಿ ಸಿರವಾರ,ದಾನಪ್ಪ ಸಿ ನಿಲೋಗಲ್ ಹಿರಿಯ ಸಾಹಿತಿ, ದೊಡ್ಡಪ್ಪ ಮುರಾರಿ, ದೊಡ್ಡ ಕರೆಪ್ಪ ಪುರಸಭೆ ಸದಸ್ಯರು,ಹನುಮಂತಪ್ಪ ವೆಂಕಟಾಪುರ, ಮಲ್ಲಯ್ಯ ಬಳ್ಳಾ,ಅಯ್ಯಪ್ಪ ಹಿರೇ ಕಡಬೂರು, ದುರುಗಪ್ಪ ಗುಡಗಲದಿನ್ನಿ, ದುರ್ಗಾ ಪ್ರಸಾದ ತೋರಣದಿನ್ನಿ, ಬಸಪ್ಪ ಜಂಗಮರ ಹಳ್ಳಿ, ಸುರೇಶ್ ಅಂತರಗಂಗಿ,ಮಲ್ಲಯ್ಯ ಮುರಾರಿ ಮಸ್ಕಿ, ಬಸವರಾಜು ಡಿ ಉದ್ಬಾಳ, ಹುಚ್ಚರೆಡ್ಡಿ ಹಿರೇದಿನ್ನಿ, ಬಾಲಸ್ವಾಮಿ ಜಿನ್ನಾಪೂರ, ಮೌನೇಶ್ ಬಳಗಾನೂರು, ಕಾಸಿಂ ಮುರಾರಿ, ಮೌನೇಶ್ ಜಾಲವಾಡಗಿ, ಮೌನೇಶ್ ತುಗ್ಗಲದಿನ್ನಿ ಡಿವಿಪಿ, ಸೇರಿದಂತೆ ಇನ್ನಿತರರೆ ದಲಿತ ಮುಖಂಡರಿದ್ದರು. 


Post a Comment

Previous Post Next Post